*ಗೋಣಿಕೊಪ್ಪಲು, ಜು. 2: ಕೊರೊನಾ ಸಾಂಕ್ರಾಮಿಕ ರೋಗ ಮಿತಿಯಿಲ್ಲದೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಕುಂದ ಬೆಟ್ಟ ಪ್ರವೇಶವನ್ನು ನಿಷೇಧಗೊಳಿಸಲಾಗಿದೆ ಎಂದು ಹಾತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದರ್ಶನ್ ತಿಳಿಸಿದ್ದಾರೆ.
ಲಾಕ್ಡೌನ್ ತೆರವುಗೊಳಿಸಿದ ಬಳಿಕ ಬಹಳ ಮಂದಿ ಪ್ರವಾಸಿಗರು ಹೊರ ಜಿಲ್ಲೆಗಳಿಂದ ಕುಂದ ಬೆಟ್ಟಕ್ಕೆ ಚಾರಣ ಕೈಗೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಆತಂಕ ಸೃಷ್ಟಿಯಾಗಿದೆ. ಇದನ್ನು ನಿವಾರಿಸುವ ಉದ್ದೇಶದಿಂದ ಮುಂದಿನ 2 ತಿಂಗಳ ಕಾಲ ಬೆಟ್ಟಕ್ಕೆ ಯಾವುದೇ ಪ್ರವೇಶವಿರುವುದಿಲ್ಲ ಎಂದು ಹೇಳಿದ್ದಾರೆ.