ಮಡಿಕೇರಿ, ಜು. 2: ರಾಜ್ಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ವಿನೂತನ ಮಾದರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೊಡಗಿನಲ್ಲೂ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಝೂಮ್ ಆ್ಯಪ್ ಪ್ರಸಾರದಲ್ಲಿ ಭಾಗಿಗಳಾದರು.ಅಧಿಕಾರ ಸ್ವೀಕಾರ ಕಾರ್ಯಕ್ರಮ ವೀಕ್ಷಣೆ ಹಾಗೂ ಅಲ್ಲಲ್ಲೇ ಪಾಲ್ಗೊಳ್ಳಲು ಝೂಮ್ ಆ್ಯಪ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೊಡಗಿನಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪಕ್ಷದ ವಿವಿಧ ಬ್ಲಾಕ್ ಹಾಗೂ ವಲಯಗಳಲ್ಲಿ ಈ ಅವಕಾಶ ಮಾಡಲಾಗಿತ್ತು. ಜಿಲ್ಲೆಯ 104 ಗ್ರಾ.ಪಂ. ಸೇರಿ 117 ಕೇಂದ್ರಗಳಲ್ಲಿ ನಿಗದಿತ ರೀತಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪದಗ್ರಹಣ ಸಂದರ್ಭದಲ್ಲಿ ಆಯಾಯ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು, ಹಿರಿಯ ಕಾಂಗ್ರೆಸ್ಸಿಗರು, ದೀಪ ಬೆಳಗುವಿಕೆ, ವಂದೇ ಮಾತರಂ ಗೀತೆಯಂತಹ ಹಾಡಿನೊಂದಿಗೆ ಭಾಗಿಗಳಾದರು. ಅಧಿಕಾರ ಸ್ವೀಕಾರವನ್ನು ವೀಕ್ಷಿಸಲು ಬೃಹತ್ ಸ್ಕಿøೀನ್‍ಗಳನ್ನು ವ್ಯವಸ್ಥೆ ಮಾಡಲಾಗಿತ್ತುಜಿಲ್ಲಾ ಕೇಂದ್ರದಲ್ಲಿ ಕೆಪಿಸಿಸಿ ಉಸ್ತುವಾರಿ ವೆಂಕಪ್ಪ ಗೌಡ ಉಸ್ತುವಾರಿಯಲ್ಲಿ ಅಂಬೇಡ್ಕರ್ ಭವನ, ಜಿಲ್ಲಾ ಕಾಂಗ್ರೆಸ್ ಕಚೇರಿ, ಕೂರ್ಗ್ ಕಮ್ಯೂನಿಟಿ ಹಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮನೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ರೀತಿಯಲ್ಲಿ ಜಿಲ್ಲೆಯ ಇನ್ನಿತರ ಕಡೆ ಹಾಗೂ ಬ್ಲಾಕ್ ಹಾಗೂ ವಲಯ ಕಾಂಗ್ರೆಸ್ ಮೂಲಕ ಕಾರ್ಯಕ್ರಮ ಜರುಗಿತು.

ಜಿಲ್ಲಾ ಕಾಂಗ್ರೆಸ್ : ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಕೆಪಿಸಿಸಿ ಕೊಡಗು ಜಿಲ್ಲಾ ವೀಕ್ಷಕರಾದ ಮಂಜುಳಾರಾಜು, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಹಿರಿಯ ಮುಖಂಡ ಚಂದ್ರಮೌಳಿ ಅವರು ದೀಪ ಬೆಳಗಿಸಿದರು.

ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಡಿಸಿಸಿ ಕಾರ್ಯದರ್ಶಿ ರಮಾನಾಥ್, ಸಾಮಾಜಿಕ ಜಾಲತಾಣದ ಮೈಸೂರು ವಿಭಾಗದ ಅಧ್ಯಕ್ಷ ಐ.ಜಿ.ಚಿಣ್ಣಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಜಿಲ್ಲಾ ವಕ್ತಾರ ಮುನೀರ್ ಅಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಉಪಾಧ್ಯಕ್ಷ ಜಫ್ರುಲ್ಲ, ಡಿಸಿಸಿ ಸದಸ್ಯ ಟಿ.ಎಂ. ಅಯ್ಯಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಡಿಸಿಸಿ ಸದಸ್ಯ ಟಿ.ಹೆಚ್. ಉದಯ, ರಾಹುಲ್ ಬ್ರಿಗೇಡ್‍ನ ಅಧ್ಯಕ್ಷ ಚುಮ್ಮಿದೇವಯ್ಯ, ಯುವ ಘಟಕದ ಅಧ್ಯಕ್ಷ ಮುದ್ದಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಮ್ಯಾಥ್ಯು, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಿಝ್ವನ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್, ಸೋನಿಯ ಗಾಂಧಿ ಬ್ರಿಗೇಡ್‍ನ ಜಿಲ್ಲಾಧ್ಯಕ್ಷೆ ಶಶಿ, ಬ್ಲಾಕ್ ಉಪಾಧ್ಯಕ್ಷೆ ಸ್ವರ್ಣಲತ, ನಗರಸಭೆ ಸದಸ್ಯೆ ತಜಸ್ಸುಂ,

(ಮೊದಲ ಪುಟದಿಂದ) ಅಲ್ಪಸಂಖ್ಯ್ಯಾತರ ಘಟಕದ ರಾಜ್ಯ ಸಂಯೋಜಕ ಎಂ.ಎ.ಉಸ್ಮಾನ್, ಸೇವದಾಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪ್ರಮುಖರಾದ ಅಜ್ಜಳ್ಳಿ ರವಿ, ರಿಯಾಸ್ ಮತ್ತಿತರರು ಹಾಜರಿದ್ದು, ನೇರ ಪ್ರಸಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣವಾಗುತ್ತಿದ್ದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನಿಂದ

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಹೆಚ್. ಎಂ. ನಂದಕುಮಾರ್ ನೇತೃತ್ವದಲ್ಲಿ ವೀಕ್ಷಣೆ ಮತ್ತು ಆಚರಣೆ ನಡೆಯಿತು, ಸೇವಾದಳದ ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ ಧ್ವಜಗೌರವ ಸಲ್ಲಿಸಿದರು. ನಗರಸಭಾ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣನವರು ದೀಪ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ ತೆನ್ನೀರಾ ಮೈನಾ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರ ನೀಡಿದರು.

ಝೂಮ್ ಆ್ಯಪ್‍ನಲ್ಲಿ ಸಂವಿಧಾನದ ಪೀಠಿಕೆ ಮತ್ತು ಪ್ರತಿಜ್ಞಾ ವಿಧಿಗಳನ್ನು ಸಾಮೂಹಿಕವಾಗಿ ಸ್ವೀಕರಿಸಲಾಯಿತು. ಕಾರ್ಯಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಹೆಚ್ ಎಂ ನಂದಕುಮಾರ್ ರವರು ಕಾಂಗ್ರೆಸ್ ಪಕ್ಷ ಬೆಳೆದು ಬಂದ ಇತಿಹಾಸವನ್ನು ಸ್ಮರಿಸಿದರು. ಹಿರಿಯ ಮುಖಂಡ ಚಂದ್ರಮೌಳಿಯವರು ಮಾತನಾಡಿ, ಇದ್ದವರು ಇಲ್ಲದವರಿಗೆ ಸಹಕಾರ ಮಾಡುವುದು ಮನುಷ್ಯ ಧರ್ಮ. ಅದನ್ನು ನಂದಕುಮಾರ್ ಪಾಲಿಸಿದ್ದಾರೆ ಎಂದು ಕಾರ್ಯ ಕ್ರಮದ ನಿಮಿತ್ತ ನಂದಕುಮಾರ್ ಪ್ರಾಯೋಜಕತ್ವದಲ್ಲಿ ಇನ್ನೂರು ಕುಟುಂಬಗಳಿಗೆ ಕಿಟ್ ವಿತರಿಸಲಾ ಯಿತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ,ಕೆಪಿಸಿಸಿ ವೀಕ್ಷಕ ವೆಂಕಪ್ಪ ಗೌಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್ , ಡಿಸಿಸಿ ಪ್ರಮುಖರಾದ ಎಮ್. ಇ. ಹನೀಫ್ , ಟಿ. ಪಿ. ರಾಜೇಂದ್ರ , ನಗರ ಸಭೆ ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಕೆ.ಎಂ. ವೆಂಕಟೇಶ್ , ಪ್ರಮುಖರಾದ ಪುಲಿಯಂಡ ಜಗದೀಶ್ , ಪ್ರಭುರೈ , ರವಿಗೌಡ , ಡಿ ಎಸ್‍ಎಸ್ ಜಿಲ್ಲಾ ಸಂಚಾಲಕ ದಿವಾಕರ್, ತೋರೆರ ಮುದ್ದಯ್ಯ, ನಗರ ಕಾಂಗ್ರೆಸ್ ಪ್ರಮುಖರಾದ ಜಗದೀಶ್,ಯತೀಶ್ ಕುಮಾರ್ , ವಸಂತ ಭಟ್ ಸೇರಿದಂತೆ ಕಾರ್ಯಕರ್ತರು ಇದ್ದರು.

ಪೊನ್ನಂಪೇಟೆ ಬ್ಲಾಕ್

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮೂವರು ಕಾರ್ಯಾಧ್ಯಕ್ಷರ ಪದಗ್ರಹಣದ ‘ಪ್ರತಿಜ್ಞಾ’ ಕಾರ್ಯಕ್ರ ಮವು ಡಿಜಿಟಲ್ ರೂಪದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ವಿವಿಧ ವಲಯದಲ್ಲಿ ಯಶಸ್ವಿಯಾಗಿ ಜರುಗಿತು. ನಗರದ ಕಾಮತ್ ನವಮಿ ಸಭಾಂಗಣದಲ್ಲಿ ಪ್ರೋಜೆಕ್ಟರ್ ಮೂಲಕ ಪರದೆಯ ಮೇಲೆ ‘ಪ್ರತಿಜ್ಞಾ’ ಕಾರ್ಯಕ್ರಮವನ್ನು ಕಾರ್ಯಕರ್ತರು ವೀಕ್ಷಿಸಿದರು.

ಗೋಣಿಕೊಪ್ಪ ವಲಯ ಕಾಂಗ್ರೆಸ್‍ನಿಂದ ಆಯೋಜನೆ ಗೊಂಡಿದ್ದ ಕಾರ್ಯಕ್ರಮವನ್ನು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಮಿದೇರಿರ ನವೀನ್, ಹಿರಿಯರಾದ ಅಜಿತ್ ಅಯ್ಯಪ್ಪ, ಹಾಗೂ ಕೆಪಿಸಿಸಿ ವೀಕ್ಷಕ ಜಾನ್‍ರವರು ಜ್ಯೋತಿ ಬೆಳಗಿಸುವು ದರ ಮೂಲಕ ಉದ್ಘಾಟಿಸಿದರು.

ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೋಣಿಕೊಪ್ಪ ವಲಯ ಕಾಂಗ್ರೆಸ್‍ನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಜಿ ಅಧ್ಯಕ್ಷ ಅಜಿತ್ ಅಯ್ಯಪ್ಪ, ಕಾಂಗ್ರೆಸ್ ಮುಖಂಡರಾದ ಹರಿದಾಸ್ ಮಣಿ, ಅಬ್ದುಲ್ ಸಮ್ಮದ್, ಅಬ್ದುಲ್‍ಜಲೀಲ್,ಶಿವಾಜಿ, ಪಿ.ಕೆ.ಪ್ರವೀಣ್, ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುಳ, ರಾಜಶೇಖರ್, ಬಿ.ಎನ್.ಪ್ರಕಾಶ್, ಯಾಸ್ಮೀನ್, ಸುಲೈಖಾ, ಮಮಿತ, ನಗರ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷರಾದ ನಾಮೇರ ಅಂಕಿತ್ ಪೊನ್ನಪ್ಪ, ಯುವ ಕಾಂಗ್ರೆಸ್‍ನ ಪದಾಧಿಕಾರಿಗಳಾದ ಆದಿತ್ಯ ಪೆಮ್ಮಯ್ಯ, ಸಚಿನ್ ಅಜ್ಜಾಜಿ,ಬಿಪಿನ್ ಅಪ್ಸಲ್, ಸಂಶೀರ್,ಕರ್ತಂಡ ಸೋಮಣ್ಣ, ಸಖೀಲ್,ಸೇರಿದಂತೆ ಇನ್ನಿತರರು ಹಾಜರಿದ್ದರು.

ವೀರಾಜಪೇಟೆ ಬ್ಲಾಕ್

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 18 ವಲಯಗಳು ಸೇರಿದಂತೆ ಏಕ ಕಾಲಕ್ಕೆ ನಗರದಲ್ಲಿ ಎರಡು ಸ್ಥಳಗಳಲ್ಲಿ ಪದಗ್ರಹಣ ಸಮಾರಂಭದ ವೀಕ್ಷಣೆ ಕಾರ್ಯಕ್ರಮವು ನಡೆಯಿತು. ನಗರದ ಎಫ್.ಎಂ.ಸಿ ರಸ್ತೆಯಲ್ಲಿರುವ ಗಣಪತಿ ಆರ್ಕೀಡ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಕದ್ದಣಿಯಂಡ ಹರೀಶ್ ಬೊಪಣ್ಣ ಮತ್ತು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಹಾಗೂ ಕಾಂಗ್ರೆಸ್ ಧುರಿಣರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಕಾರ್ಯಕರ್ತರ ಮತ್ತು ಪಕ್ಷದ ಮುಖಂಡರ ಸಮ್ಮುಖದಲ್ಲಿ ಮೊದಲಿಗೆ ರಾಷ್ಟ್ರಗೀತೆ, ಪ್ರತಿಜ್ಞಾ ವಿಧಿಯನ್ನು ಹಾಗೂ ಪೀಠಿಕೆಯನ್ನು ಓದಿ ತಿಳಿಸಲಾಗಿ ಎಲ್ಲಾ ಕಾರ್ಯ ಕರ್ತರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಸ್ತವಾರಿ ವಹಿಸಿದ್ದ ಪಿ.ರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದÀರ್ಶಿ ಜಾನ್ಸಾನ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ.ಮೋಹನ್ ಕುಮಾರ್, ಡಿ.ಸಿ.ಸಿ ಸದಸ್ಯರು, ಸಾಮಾಜಿಕ ಜಾಲತಾಣ ಮುಖ್ಯಸ್ಥ ಲೊಹಿತ್ ಗೌಡ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪೊನ್ನಕ್ಕಿ, ನಗರ ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಗಳು, ಪ.ಪಂ. ಮಾಜಿ ಸದಸ್ಯರು ಹಾಲಿ ಸದಸ್ಯರು ಹಾಜರಿದ್ದರು.

ಸೋಮವಾರಪೇಟೆ ಬ್ಲಾಕ್

ಸೋಮವಾರಪೇಟೆ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಥಳೀಯ ಒಕ್ಕಲಿಗರ ಸಭಾಂಗಣದ ಶ್ರೀಗಂಧ ಹಾಲ್‍ನಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಸೋಮವಾರಪೇಟೆ ಬ್ಲಾಕ್ ಉಸ್ತುವಾರಿ ಎಡ್ವಿನ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ಡಿಸೋಜ, ಪ್ರಮುಖರಾದ ಚಂಗಪ್ಪ, ಜಯೇಂದ್ರ, ನಂದಕುಮಾರ್, ಈಶ್ವರಚಂದ್ರ ಸಾಗರ್, ಹೆಚ್.ಸಿ. ನಾಗೇಶ್, ನಂದಕುಮಾರ್, ಬಸವರಾಜು, ಉದಯಶಂಕರ್, ನಾಗರಾಜು, ವೆಂಕಟೇಶ್, ಯುವ ಕಾಂಗ್ರೆಸ್‍ನ ಮಂಜುನಾಥ್, ಅಶ್ರಫ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಮಹಿಳಾ ಕಾಂಗ್ರೆಸ್‍ನಿಂದ

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇತಿಹಾಸ ಮರುಕಳಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಅವರ ನಿವಾಸದ ಸಭಾಂಗಣದಲ್ಲಿ ನಡೆದ ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಅವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ಝೂಮ್ ಆ್ಯಪ್ ಮೂಲಕ ಕಾರ್ಯಕ್ರಮ ವೀಕ್ಷಿಸಿದ ಮಹಿಳಾ ಮುಖಂಡರು ಹಾಗೂ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕುಶಾಲನಗರ ಬ್ಲಾಕ್

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮ ಆಚರಿಸಲಾಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್‍ಕುಮಾರ್, ಬ್ಲಾಕ್ ಉಸ್ತುವಾರಿ ಪ್ರದೀಪ್ ರೈ ಪಾಂಬಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಆರಂಭಿಸಲಾಯಿತು. ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಎಸ್.ಕೆ.ವೀರಪ್ಪ ಉದ್ಘಾಟಿಸಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಂವಿಧಾನ ಪೀಠಿಕೆ ಓದುವುದರೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ನೂತನ ಸಾರಥಿಗೆ ಸಾಥ್ ನೀಡಿದರು.

ಈ ಸಂದರ್ಭ ಕುಶಾಲನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರೀಫ್ ಇಬ್ರಾಹಿಂ, ಬ್ಲಾಕ್ ಯೂತ್ ಅಧ್ಯಕ್ಷ ದೇವಪ್ಪ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ತ್ರಿನೇಶ್, ಎಸ್‍ಸಿ ಘಟಕ ಉಪಾಧ್ಯಕ್ಷ ಜನಾರ್ಧನ್, ಪ್ರಮುಖರಾದ ಆರ್.ಕೆ. ನಾಗೇಂದ್ರಬಾಬು, ರಫೀಕ್, ಗಿರೀಶ್, ಮಹಿಳಾ ಘಟಕದ ಜಯಪ್ರಕಾಶ್, ಶಿವಮ್ಮ, ಜಾವಿದ್, ಲಲಿತಾ ಮೊಣ್ಣಪ್ಪ ಮತ್ತಿತರರು ಇದ್ದರು.

ನಾಪೆÇೀಕ್ಲು ಬ್ಲಾಕ್

ನಾಪೆÇೀಕ್ಲುವಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ವೀಕ್ಷಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಂಗ್ರೆಸ್‍ನ ಹಿರಿಯ ಮುಖಂಡ ಅರೆಯಡ ಡಿ.ಸೋಮಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹೇಮನಾಥ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ವಲಯಾಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಎ.ಕೆ.ಹಾರೀಸ್, ಮುಖಂಡರಾದ ನೆರವಂಡ ಉಮೇಶ್, ಸುದೈ ನಾಣಯ್ಯ, ಕಾಳೆಯಂಡ ಸಾಬಾ ತಿಮ್ಮಯ್ಯ, ಸಲೀಂ ಹಾರೀಸ್, ಸಿ.ಹೆಚ್. ಅಹಮ್ಮದ್, ಸಿರಾಜ್ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಡಿಜಿಟಲ್ ತಂತ್ರಾಂಶದ ಮೂಲಕ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಟಿ.ವಿ ಪರದೆಯಲ್ಲಿ ವೀಕ್ಷಿಸಲಾಯಿತು.

(ಜಿಲ್ಲೆಯ ಇತರೆಡೆ ಈ ಕುರಿತು ನಡೆದ ಕಾರ್ಯಕ್ರಮಗಳ ವಿವರ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.)