ಸುಂಟಿಕೊಪ್ಪ, ಜು. 2: ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಹೊರ ಜಿಲ್ಲೆಗೆ ತೆರಳಿ ಬಂದ ಕಾರಣ ಅವರನ್ನು ಕಾಫಿ ತೋಟದ ಲೈನ್ ಮನೆಯ ಅವ್ಯವಸ್ಥೆ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಿರುವುದನ್ನು ಖಂಡಿಸಿ ತೋಟದ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಆಸ್ಪತ್ರೆಗೆ ತೆರಳಿ ಹಿಂತಿರುಗಿ ಬಂದಿದ್ದು ಅವರನ್ನು ಸುಂಟಿಕೊಪ್ಪದ ಖಾಸಗಿ ಸಂಸ್ಥೆಯ ತೋಟದ ಲೈನ್ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಆದರೆ ಇದನ್ನು ಸಹಿಸದ ತೋಟದ ಕಾರ್ಮಿಕರು ಇಂದು ಎಸ್ಟೇಟಿನ ವ್ಯವಸ್ಥಾಪಕರೊಡನೆ ಮಾತನಾಡಿ, ಕ್ವಾರಂಟೈನ್‍ನಲ್ಲಿರುವ ಮಹಿಳೆಯನ್ನು ತಕ್ಷಣದಲ್ಲೇ ಬೇರೆಡೆಗೆ ವ್ಯವಸ್ಥೆ ಕಲ್ಪಿಸುವುದೇ ಸೂಕ್ತವೆಂದು ಬೇಡಿಕೆಯಿಟ್ಟರು. ತೋಟದ ವ್ಯವಸ್ಥಾಪಕರು ಕ್ರಮಕೈಗೊಳ್ಳಲು ಮುಂದಾಗದಿರುವುದನ್ನು ಖಂಡಿಸಿ ಎಲ್ಲಾ ಕಾರ್ಮಿಕರು ಕಚೇರಿಯ ಮುಂದೆ ಧರಣಿ ಕುಳಿತರು. ಕೂಡಲೇ ಮಹಿಳೆಯರು ಆ ಮಹಿಳೆಯನ್ನು ಈ ಕ್ಷಣದಲ್ಲಿ ಹೊರ ಕಳುಹಿಸಿದರೆ ಮಾತ್ರ ನಾವುಗಳು ಕೂಲಿ ಕೆಲಸ ನಿರ್ವಹಿಸುತ್ತೇವೆ ಇಲ್ಲದಿದ್ದರೆ ನಾವು ಕೆಲಸಕ್ಕೆ ತೆರಳುವುದಿಲ್ಲ ಎಂದು ಪಟ್ಟುಹಿಡಿದರು. ವರ್ಗಾಯಿಸಿ ಎಂದು ರಜೆ ಮಾಡಿ ಮನೆಗೆ ತೆರಳಿದ ಸನ್ನಿವೇಶ ನಡೆಯಿತು. ನಂತರ ಎಸ್ಟೇಟಿನ ಅಧಿಕಾರಿಗಳು ಆ ಮಹಿಳೆಗೆ ಬೇರೆಡೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ತಿಳಿಸಿದರ