ನಾಪೋಕ್ಲು, ಜು. 2: ಇಲ್ಲಿನ ಸಂತ ಮೇರಿ ಮಾತೆ ದೇವಾಲಯದ ನೂತನ ಗುರುಗಳಾಗಿ ಜ್ಞಾನಪ್ರಕಾಶ್ ಅಧಿಕಾರ ವಹಿಸಿಕೊಂಡರು. ವೀರಾಜಪೇಟೆಯ ಧರ್ಮಗುರುಗಳಾದ ಮದಲೈ ಮುತ್ತು ಪ್ರಮಾಣವಚನ ಭೋದಿಸಿದರು. ನಿವೃತ್ತ ಧರ್ಮಗುರುಗಳಾದ ಇಗ್ನೇಶಿಯಸ್ ಮಸ್ಕರೇನಸ್ ಲೆಕ್ಕಪತ್ರ ಮತ್ತು ಬೀಗದ ಕೀ ಹಸ್ತಾಂತರಿಸಿದರು. ದೇವಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಾರ್ಜ್ ಮಸ್ಕರೇನಸ್ ಸ್ವಾಗತಿಸಿ ವಂದಿಸಿದರು. ದೇವಾಲಯದ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.