ಮಡಿಕೇರಿ, ಜು. 2: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಅಮ್ಮತ್ತಿ ಇದರ ವತಿಯಿಂದ ಸಂಘದ ಸಭಾಂಗಣದಲ್ಲಿ ಏಳು ಆಶಾ ಕಾರ್ಯಕರ್ತೆಯರಿಗೆ ತಲಾ ರೂ. 3,000 ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಹೆಚ್.ಬಿ. ರೋಹಿಣಿ, ಶಶಿಕಲಾ, ಆಶ್ಮ ಬಿ.ಐ., ರೇವತಿ ಕೆ.ಡಿ., ಜ್ಯೋತಿ ಹೆಚ್.ಬಿ., ಜಗದೀಶ್ ಎಂ.ಎಸ್., ಪದ್ಮಿನಿ ಕೆ.ಆರ್. ಹಾಗೂ ಸಂಘದ ಅಧ್ಯಕ್ಷ ಕುಟ್ಟಂಡ ಕೆ. ವಿನೂ ಪೂವಯ್ಯ, ಉಪಾಧ್ಯಕ್ಷ ಐನಚಿಡ ಕೆ. ಅಯ್ಯಣ್ಣ, ನಿರ್ದೇಶಕರಾದ ಮೂಕೋಂಡ ಸಿ. ಅಯ್ಯಪ್ಪ, ಮಾಚಿಮಂಡ ಎಂ. ಉತ್ತಪ್ಪ, ಮುಕ್ಕಾಟಿರ ಎ. ಸಂತೋಷ್, ಕುಟ್ಟಂಡ ಎಂ. ತಿಮ್ಮಯ್ಯ, ಎನ್.ಎಸ್. ಪ್ರಜೀತ್, ಬಿ.ಬಿ. ಸಂಜೀವ, ಕುಟ್ಟಂಡ ಟಿ. ಪೊನ್ನಮ್ಮ, ಕುಟ್ಟಂಡ ರೀಟಾ ಚಿಣ್ಣಪ್ಪ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ರಜನಿಯವರು ಹಾಜರಿದ್ದರು.