ಶನಿವಾರಸಂತೆ, ಜು. 2: ವಿಶ್ವ ಮಾಧಕ ವಸ್ತುಗಳ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕೊರೊನಾ ವೈರಸ್ ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳುವಂತೆ ತಿಳಿ ಹೇಳಿದರು. ಈ ಸಂದರ್ಭ ಎ.ಎಸ್.ಐ.ಗಳಾದ ಹೆಚ್.ಎಂ. ಗೋವಿಂದ್, ಕೃಷ್ಣೇಗೌಡ, ಸಿಬ್ಬಂದಿಗಳಾದ ಬೋಪಣ್ಣ, ಲೋಕೇಶ್, ರವಿಚಂದ್ರ, ವಿನಯ, ಮುರುಳಿ, ಸೋನಿ, ಶಶಿ, ಪೂರ್ಣಿಮ, ಉಷಾ ಇತರರಿದ್ದರು.