ನಾಪೆÇೀಕ್ಲು, ಜು. 1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹುದಿಕೇರಿಯ ತ್ರಿವೇಣಿ ಮಹಿಳಾ ಭವನದಲ್ಲಿ ಪರಿಸರ ಮಾಹಿತಿ ಮತ್ತು ಸಸಿ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುದಿಕೇರಿ ಒಕ್ಕೂಟದ ಅಧ್ಯಕ್ಷೆ ತೀತಿರ ಊರ್ಮಿಳಾ ಸೋಮಯ್ಯ ವಹಿಸಿದ್ದರು. ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಜಡೇಗೌಡ ಸಸಿಗೆ ನೀರು ಹಾಕುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಚೇತನ್ ಕೆ, ಪೆÇನ್ನಂಪೇಟೆ ವಲಯ ಮೇಲ್ವಿಚಾರಕಿ ಜಯಶ್ರೀ ಎಂ, ಸೇವಾ ಪ್ರತಿನಿಧಿ ಪಾರ್ವತಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಸಿಗಳ ನಾಟಿ ಮತ್ತು ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.