ಶನಿವಾರಸಂತೆ, ಜು. 1: ಕೊಡ್ಲಿಪೇಟೆ ಮಸೀದಿ ರಸ್ತೆ ನಿವಾಸಿ, ವ್ಯಾಪಾರಿಗೆ ಚೀಟಿ ಹಣ ವಾಪಾಸು ಕಟ್ಟದ ಬಗ್ಗೆ ಚೀಟಿ ನಡೆಸುತ್ತಿದ್ದಾತ ಹಲ್ಲೆ ನಡೆಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೊಡ್ಲಿಪೇಟೆ ಹೋಬಳಿಯ ಡೊಡ್ಡಕೊಡ್ಲಿ ಗ್ರಾಮದ ನಿವಾಸಿ ಎಂ.ಎ. ಇದ್ರೀಸ್ ಚೀಟಿ ವ್ಯವಹಾರ ನಡೆಸುತ್ತಿದ್ದು, ಕೊಡ್ಲಿಪೇಟೆ ಮಸೀದಿ ರಸ್ತೆಯ ವ್ಯಾಪಾರಿ ಡಿ. ಖುದ್ದೂಸ್ ಚೀಟಿ ಕೂಗಿ ಹಣ ಪಡೆದಿದ್ದಾರೆ. ಆದರೆ ಚೀಟಿ ಹಣ ವಾಪಾಸು ಕಟ್ಟದೆ ಇದ್ದ ಬಗ್ಗೆ ಖುದ್ದೂಸ್ ಅವರ ಮನೆಗೆ ಪ್ರವೇಶ ಮಾಡಿ ಚೀಟಿ ಹಣ ಕೊಡುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಖುದ್ದೂಸ್ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ ರವಿಚಂದ್ರ ಪರಿಶೀಲಿಸಿ ಕಲಂ 448, 323, 504, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.