ಕೊಡ್ಲಿಪೇಟೆ: ಸಮೀಪದ ಬೆಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ನಡೆಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆ. ವೆಂಕಟೇಶ್, ಕೊರೊನಾ ವೈರಸ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಇವರುಗಳು ನೀಡುವ ಸಲಹೆ ಸೂಚನೆಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶಾ ಕಾರ್ಯಕರ್ತೆ ಪಾರ್ವತಿ ಅವರು, ಗ್ರಾಮ ವ್ಯಾಪ್ತಿಯಲ್ಲಿ ಕೊರೊನಾ ನಿಗ್ರಹದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿಯೋರ್ವರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ಹಾಲಪ್ಪ, ವಿರೂಪಾಕ್ಷ, ಶಂಕ್ರಪ್ಪ, ಕಾಳಪ್ಪ, ಚಂದ್ರಕಲಾ, ಲೋಲಾಕ್ಷಿ, ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಮೂರ್ತಿ, ಸಹಾಯಕಿ ರೂಪವತಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರಾದ ವಿಜಯ, ಜ್ಯೋತಿ, ಪಾರ್ವತಿ, ಉದಯಕುಮಾರಿ, ರತಿ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಗೋಣಿಕೊಪ್ಪ ವರದಿ: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಐವರು ಕೊರೊನಾ ಸೇನಾನಿಗಳನ್ನು ಗೌರವಿಸಲಾಯಿತು.
ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇನಾನಿಗಳಾದ ರತ್ನಕುಮಾರಿ, ರಾಣಿ, ಶೋಭಾ, ಸರಸು ಹಾಗೂ ಪಂಕಜ ಅವರುಗಳಿಗೆ ತಲಾ ರೂ. 3 ಸಾವಿರ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.
ಕೊರೊನಾ ಹಿಮ್ಮೆಟ್ಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಗ್ಗೆ ಫ್ಯಾಕ್ಸ್ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಇಒ. ವಿ.ಎಸ್. ಸುಬ್ರಮಣಿ ಹಾಗೂ ಸದಸ್ಯರುಗಳು ಇದ್ದರು.ಗೋಣಿಕೊಪ್ಪಲು: ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಇದರ ವತಿಯಿಂದ ಸಂಘದ ಕಚೇರಿಯಲ್ಲಿ ಐವರು ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಗಳ ಸಹಾಯ ಧನ ನೀಡಲಾಯಿತು.
ಸಂಘದ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಕಾರ್ಯಕರ್ತೆಯರಾದ ಟಿ.ಕೆ. ಉಷಾ, ಎಂ.ಸಿ. ಶಾಂತಿ, ಕೆ.ಪಿ. ಬಾನು, ಹೆಚ್.ಎಸ್. ಲಿಲಿತಾ, ಆರ್. ಮಂಜುಳಾ ಅವರಿಗೆ ಸನ್ಮಾನ ಮಾಡುವುದರ ಮೂಲಕ ಧನ ಸಹಾಯ ನೀಡಿದರು.
ಬಳಿಕ ಮಾತನಾಡಿದ ಅವರು, ವಿಶ್ವದ ಮಹಾಮಾರಿ ಕೊರೊನಾ ರೋಗಾಣು ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸಲು ಮತ್ತು ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಮನೆ ಮನೆ ಸುತ್ತುತ್ತಿದ್ದಾರೆ. ಇಂಥವರಿಗೆ ಸರ್ಕಾರ ಸಹಕಾರಿ ಇಲಾಖೆ ಮೂಲಕ ನೆರವು ನೀಡಲು ಸೂಚಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಜೀವ ಭಯ ತೊರೆದು ಸಾರ್ಥಕ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಇಡೀ ಸಮಾಜ ಗೌರವಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪಾಧ್ಯಕ್ಷೆ ಕಾವೇರಮ್ಮ, ಕಾರ್ಯದರ್ಶಿ ಟಿ.ಎ. ಅನಿತಾ, ನಿರ್ದೇಶಕರಾದ ಮಲಚೀರ ಬೋಸ್, ಅರಮಣಮಾಡ ರಂಜನ್ ಚಂಗಪ್ಪ, ಸುಂದರೇಶ್, ಕಾಯಮಾಡ ರಾಜ, ಪೆÇೀಡಮಾಡ, ಸುಕೇಶ್ ಹಾಜರಿದ್ದರು.