ಕೊಡ್ಲಿಪೇಟೆ, ಜು. 1: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇದೀಗ ನಿವೃತ್ತರಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಡಿ. ನಾಗರಾಜ್ ಅವರನ್ನು ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರೂ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿವೃತ್ತ ಸಿಇಓ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಕೊಡ್ಲಿಪೇಟೆಯಂತಹ ಗ್ರಾಮೀಣ ಭಾಗದಲ್ಲಿ, ಸಹಕಾರ ಸಂಘದ ಮೂಲಕ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ದೊರಕಿಸಿಕೊಡುವಲ್ಲಿ ಇವರ ಸೇವೆ ಮಹತ್ತರವಾದುದು ಎಂದು ಬಣ್ಣಿಸಿದರು. ಸಂಘದ ಉಪಾಧ್ಯಕ್ಷ ಬಿ.ಕೆ. ಯತೀಶ್, ಸಿಬ್ಬಂದಿಗಳಾದ ಸುರೇಶ್, ಯು.ಪಿ. ನಾಗೇಶ್ ಅವರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಸಿ. ಪ್ರಸನ್ನ, ರಾಜು, ಭಾನುಮತಿ, ಅಶೋಕ, ತೇಜ್ಕುಮಾರ್, ರಂಜಿತ, ವಹಾಬ್, ಮಲ್ಲೇಶ್, ಸುಬ್ರಮಣ್ಯಾ ಚಾರ್, ಪಿಗ್ಮಿ ಸಂಗ್ರಾಹಕರು, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. - ಧರ್ಮ