ಶ್ರೀಮಂಗಲ, ಜೂ. 30: ರಾಜ್ಯ ಸರಕಾರದಿಂದ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತರುತ್ತಿರುವುದಿಂದ ಕೃಷಿ ಭೂಮಿ ವ್ಯಾಪಕವಾಗಿ ವಾಣಿಜ್ಯ ಉದ್ದೇಶ ಪರಿವರ್ತನೆಯಾಗುವ ಆತಂಕÀ ಎದುರಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ಸರಕಾರದ ಆದೇಶವು ಕಾನೂನು ಬಾಹಿರ ಮತ್ತು ಕೊಡಗಿನ ಸ್ಥಳೀಯ ಸಮುದಾಯಗಳಿಗೆ ಹೆಚ್ಚು ಹಾನಿಕಾರವಾಗಿದೆ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಕಾಯಿದೆಗೆ ತಡೆಯೊಡ್ಡಲು ಪೆÇನ್ನಂಪೇಟೆಯಲ್ಲಿ ನಡೆದ ಕೊಡಗು ಸಂರಕ್ಷಣಾ ವೇದಿಕೆಂiÀi ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆಯ ಅಧ್ಯಕ್ಷ ಚೊಟ್ಟೆಯಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸರಕಾರದ ಆಡಿಟಿಂಗ್ ಜನರಲ್ ಕಚೇರಿಯಿಂದ 18.03.2018ರಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಉದ್ದೇಶಿಸಿ ಬರೆದ ಪತ್ರವು ಕೊಡಗು ಜಿಲ್ಲೆಯ ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳ ಹಾಗೂ ಬಾಣೆ ಜಾಗದ ಭೂ ಪರಿವರ್ತನೆ ರಾಜ್ಯದ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ವಿರುದ್ಧವಾಗಿದೆ ಎಂಬುವದನ್ನು ಸಾಬೀತು ಪಡಿಸುತ್ತದೆ. ಆದಾಗ್ಯೂ ಕೊಡಗಿನ ಕೃಷಿ ಭೂಮಿ, ಕಾಫಿ ಪ್ಲಾಂಟೇಷನ್ ಮತ್ತು ಬಾಣೆ ಜಾಗವನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿರುವ ಜಿಲ್ಲಾಧಿಕಾರಿಗಳಾದ ಡಾ. ವಿ.ಎನ್. ಪ್ರಸಾದ್, ಅನುರಾಗ್ ತಿವಾರಿ, ಮಿರ್ ಅನೀಸ್ ಅಹಮ್ಮದ್, ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ಪಿ.ಐ ಶ್ರೀವಿದ್ಯಾ ಅವರಿಗೆ ಒಂದು ತಿಂಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಆದರೆ ಇದುವರೆಗೂ ಅವರು ಯಾವುದೇ ಉತ್ತರ ನೀಡಿರುವುದಿಲ್ಲ ಎಂದು ರಾಜೀವ್ ಬೋಪಯ್ಯ ಸಭೆಯ ಗಮನಕ್ಕೆ ತಂದರು.
ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ ಮಾತನಾಡಿ ಕೊಡಗು ಜಿಲ್ಲೆಯನ್ನು ನಗರೀಕರಣದ ಬಗ್ಗೆ ಐ.ಐ.ಎಸ್.ಸಿ ನೀಡಿದ ವರದಿಯು ಕೊಡಗಿನ ಭೂದೃಶ್ಯಕ್ಕೆ ಮತ್ತು ಕಾವೇರಿ ನದಿಗೆ ಹಾನಿಕಾರಕವಾಗಿದೆ ಎಂಬುವದನ್ನು ಸಾಬೀತು ಪಡಿಸುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದೇವೆ ರಾಜ್ಯ ಸರಕಾರದ ಈ ಅಕ್ರಮ ಆದೇಶವನ್ನು ರದ್ದುಗೊಳಿಸುವಂತೆ ಕಾನೂನು ತಜ್ಞರ ನೆರವು ಪಡೆದು ಮುಂದಿನ ಹೋರಾಟ ರೂಪಿಸಬೇಕಾಗಿದೆ. ಈ ಹಿಂದೆ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು ಕಾನೂನು ಬಾಹಿರವಾಗಿದೆ. ಪ್ರಸ್ತುತ ಸರಕಾರದ ಕಾಯಿದೆಯಂತೆ ಜಿಲ್ಲೆಯ ಕಾಫಿ ಪ್ಲಾಂಟೇಷನ್, ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿದರೆ ನ್ಯಾಯಾಲಯ ನೀಡುವ ಆದೇಶದಂತೆ ಭೂ ಪರಿವರ್ತನೆಯಾದ ಜಾಗ ಹಾಗೂ ವಾಣಿಜ್ಯ ಉದ್ದೇಶದ ನಿವೇಶನ, ಕಟ್ಟಡ ಕಾನೂನು ಬಾಹಿರವಾಗಿರುತ್ತದೆ. ಜನರು ವಾಣಿಜ್ಯ ಉದ್ದೇಶಕ್ಕೆ ಭೂ ಖರೀದಿಸುವುದು ಹಾಗೂ ಪರಿವರ್ತಿಸುವುದಕ್ಕೆ ದಾವಿಸದಂತೆ ಕಿವಿಮಾತು ಹೇಳಿದ ಅವರು ಭೂ ಪರಿವರ್ತನೆ ರದ್ದುಗೊಳಿಸುವ ನ್ಯಾಯಾಲಯದ ಆದೇಶವಿರಬಹುದು ಮತ್ತು ಭೂ ಪರಿವರ್ತನೆ ಕಾನೂನು ಬಾಹಿರವಾದುದರಿಂದ ಯಾವುದೇ ನಿರ್ಮಾಣವನ್ನು ಸಹ ಕೆಡವಬಹುದು ಎಂದು ಅವರು ಎಚ್ಚರಿಸಿದರು. ನ್ಯಾಯಾಲಯದ ಆದೇಶದಂತೆ ಕಾನೂನು ಬಾಹಿರ ನಿರ್ಮಾಣಗಳನ್ನು ಕೇರಳ ರಾಜ್ಯದಲ್ಲಿ ಕೆಡವಿರುವುದು ಮತ್ತು ಮುಂಬೈ ಮಹಾನಗರದಲ್ಲಿ ಕೆಡವಲು ಆದೇಶ ಹೊರಡಿಸಿರುವುದನ್ನು ಅವರು ಉದಾಹರಿಸಿದರು.
ಕೊಡಗು ಜಿಲ್ಲೆಯ ಕೃಷಿ ಪ್ರದೇಶ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಸೇರಿದಂತೆ ಇತರ ಎಲ್ಲಾ ನದಿಗಳಿಗೆ ನೀರಿನ ಇಳುವರಿ ನೀಡುವ ಪೂರಕ ಪ್ರದೇಶವಾಗಿದೆ. ಇಂತಹ ಕೃಷಿ ಭೂಮಿಯನ್ನು ವಾಣಿಜ್ಯಕರಣಗೊಳಿಸುವ ಕಾಯಿದೆ ದಕ್ಷಿಣ ಭಾರತದ 8 ಕೋಟಿ ಜನರಿಗೆ ಕೃಷಿ ಹಾಗೂ ಕುಡಿಯುವ ನೀರು ಒದಗಿಸುವ ಕಾವೇರಿ ನದಿಯ ಬರಡಾಗುವಿಕೆಗೆ ಅಪಾಯ ತಂದೊಡ್ಡಲಿದೆ. ಕೃಷಿಯನ್ನೇ ಅವಲಂಬಿಸಿರುವ ಜಿಲ್ಲೆಯ ಜನರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ಅಭದ್ರತೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಬ್ಯಾಂಕುಗಳು ಪರಿವರ್ತಿತ ಆಸ್ತಿಗಳನ್ನು ಅಡಮಾನ ಪಡೆದು ಸಾಲ ನೀಡುವಂತಹ ಕೆಲವು ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪರಿವರ್ತಿತವಲ್ಲದ ಕೃಷಿ ಭೂಮಿಗೂ ಸೂಕ್ತ ಸಾಲ ನೀಡುವಂತೆ ನಿಯಮ ಜಾರಿಗೊಳಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈಗಾಗಲೇ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಸಾವಿರಾರು ಎಕರೆ ಜಾಗವನ್ನು ಜಿಲ್ಲೆಯಲ್ಲಿ ಖರೀದಿಸಿದ್ದು, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಸರಕಾರದ ಮೇಲೆ ಒತ್ತಡ ಹೇರಿ ಪರಿವರ್ತನೆ ಮಾಡಿ ಲಾಭ ಮಾಡಿಕೊಳ್ಳಲು ಇಂತಹ ಕಾನೂನುಗಳನ್ನು ತರಲಾಗುತ್ತಿದೆ ಎಂದು ಸಭೆಯಲ್ಲಿ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಮ್ಮತ್ತಿ ರೈತ ಸಂಘದ ಐನಂಡ ಜಪ್ಪು ಅಚ್ಚಪ್ಪ, ಪಟ್ಟಡ ಅರುಣ್ ಚಂಗಪ್ಪ, ದೇವ್‍ಉತ್ತಯ್ಯ, ಪೆÇನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಕರ್ನಾಟಕ ರಾಜ್ಯ ರೈತ ಸಂಘದ (ಪೆÇ್ರ. ನಂಜುಂಡ ಸ್ವಾಮಿ ಬಣ) ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್, ಕಾರ್ಯದರ್ಶಿ ಕಳ್ಳಿಚಂಡ ಧÀನು, ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶರಿಸುಬ್ಬಯ್ಯ, ಪೆÇನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭುಪೂಣಚ್ಚ, ಸೇವ್ ಕೊಡಗು ಸಂಘಟನೆಯ ಜಮ್ಮಡ ಗಣೇಶ್‍ಅಯ್ಯಣ್ಣ, ಕೊಟ್ಟಂಗಡ ಶೈಲಾ, ಮಂಡೆಪಂಡ ಕುಟ್ಟಣ್ಣ, ಕಾವೇರಿ ಸೇನೆಯ ಅಧ್ಯಕ್ಷ ಕಿಮ್ಮುಡೀರ ರವಿಚಂಗಪ್ಪ, ಜಿ.ಡಿ. ಶಿವಶಂಕರ್ ಮತ್ತಿತರು ಭೂ ಸುದಾರಣೆ ಕಾಯಿದೆ ತಿದ್ದುಪಡಿಯನ್ನು ವಿರೊಧಿಸಿ ಮಾತನಾಡಿದರು.
- ಹರೀಶ್ ಮಾದಪ್ಪ