ನಾಪೆÇೀಕ್ಲು, ಜೂ. 30: ಕೊಡಗಿನ ಕುಲದೇವ, ಮಳೆ ದೇವರೆಂದೇ ಪ್ರಖ್ಯಾತಿ ಹೊಂದಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಭಕ್ತರ ಆಗಮನವನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ತಿಳಿಸಿದ್ದಾರೆ. ದೇವಳ ಈ ನಿರ್ಣಯ ಕೈಗೊಂಡಿದ್ದು, ಮಾರಕ ರೋಗ ಕೊರೋನವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಪ್ರವಾಸಿಗರು ಮತ್ತು ಭಕ್ತರಿಗೆ ಕೆಲಕಾಲ ನಿಷೇಧ ಹೇರಲಾಗಿದೆ. ಈ ಸಮಯದಲ್ಲಿ ನಿತ್ಯ ಪೂಜೆ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.