ಕುಶಾಲನಗರ, ಜೂ. 30: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಕುಶಾಲನಗರ ಪ್ರವಾಸಿ ಮಂದಿರವನ್ನು ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದರೂ ನಿಯಮಬಾಹಿರವಾಗಿ ಕೆಲವು ಸಂಘಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯದ್ವಾರ ಮುಚ್ಚಲ್ಪಟ್ಟಿದ್ದು ಗೇಟ್‍ನಲ್ಲಿ ಮಾಹಿತಿ ಫಲಕ ಹಾಕಲಾಗಿದ್ದರೂ ದಿನನಿತ್ಯ ಜನರ ಓಡಾಟ ಕಂಡು ಬರುತ್ತಿದೆ. ಅಲ್ಲದೆ ಸಂಘಸಂಸ್ಥೆಗಳು ಸಭೆ, ಸುದ್ದಿಗೋಷ್ಠಿ ಮತ್ತಿತರ ಚಟುವಟಿಕೆಗಳನ್ನು
(ಮೊದಲ ಪುಟದಿಂದ) ನಡೆಸುತ್ತಿದ್ದು ಸರಕಾರಿ ಆದೇಶವನ್ನು ಉಲ್ಲಂಘಿಸುವುದರೊಂದಿಗೆ ಸದಾ ಜನರು ಗಿಜಿಗುಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಮುಖ್ಯ ಗೇಟ್ ಬೀಗ ಹಾಕಿದರೂ ಪಕ್ಕದಲ್ಲಿರುವ ಸಣ್ಣ ದ್ವಾರದ ಮೂಲಕ ಪ್ರವಾಸಿ ಮಂದಿರಕ್ಕೆ ದ್ವಿಚಕ್ರ ವಾಹನಗಳು, ಜನರು ತೆರಳುತ್ತಿದ್ದು ಇಲ್ಲಿನ ಸಿಬ್ಬಂದಿಗಳಿಗೆ ಇದು ತಲೆನೋವಾಗಿ ಪರಿಣಮಿಸಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸ್ಥಳೀಯ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ಆಗ್ರಹಿಸಿದ್ದಾರೆ.