ಮಡಿಕೇರಿ, ಜೂ. 30: ತಾ. 29ರ ರಾತ್ರಿ ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ಬಳಿ ಸುರೇಶ್ ಎಂಬವರ ಮನೆಯ ಹಿಂಬದಿ ತಡೆಗೋಡೆ ಕುಸಿದಿದ್ದು, ಇಂದು ಕುಸಿತಗೊಂಡಿದ್ದ ಸ್ಥಳದಲ್ಲಿದ್ದ ಅವಶೇಷಗಳನ್ನು ಜೆಸಿಬಿ ಮೂಲಕ ತೆರೆಯಲಾಯಿತು.
ಸ್ಥಳಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ಸೇರಿದಂತೆ ನಗರಸಭಾ ಇಂಜಿನಿಯರ್ಗಳು ಬಂದು ಪರಿಶೀಲಿಸಿದರು. ಇಂದು ಒಂದು ಸಣ್ಣ ಪ್ರಮಾಣದ ಕುಸಿತವಾದ ಕಾರಣ ಅಲ್ಲಿನ ನಿವಾಸಿಗಳ ಸ್ಥಳಾಂತರ ಅಗತ್ಯವಿಲ್ಲ. ಮನೆಯ ಮಾಲೀಕ ಬೆಂಗಳೂರಿನಲ್ಲಿರುವುದಾಗಿ ಹಾಗೂ ಅವರೇ ಈ ತಡೆಗೋಡೆಯನ್ನು ಮನೆ ನಿರ್ಮಿಸುವ ಸಂದರ್ಭ ಕಟ್ಟಿರುವುದಾಗಿ ಅನನ್ಯ ವಾಸುದೇವ್ ಮಾಹಿತಿ ನೀಡಿದ್ದಾರೆ.