ಪೆÇನ್ನಂಪೇಟೆ, ಜೂ. 30: ವಿವಾಹಿತ ಮಹಿಳೆಯೊಬ್ಬರು ತನ್ನ ಎರಡೂವರೆ ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಪೆÇನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಗೌರಿಬಾಣೆ ಪೈಸಾರಿಯಲ್ಲಿ ನಡೆದಿದೆ. ಪತ್ನಿ ಹಾಗೂ ಮಗು ಕಾಣೆಯಾಗಿರುವ ಬಗ್ಗೆ ಪತಿ ಮಹೇಶ್ ಪೆÇನ್ನಂಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೌರಿಬಾಣೆ ಪೈಸಾರಿಯ ನಿವಾಸಿ ಎಚ್.ಎನ್. ಮಹೇಶ್ ಎಂಬವರ ಪತ್ನಿ 28 ವರ್ಷ ಪ್ರಾಯದ ಸುಮಿತ, ತನ್ನ ಎರಡೂವರೆ ವರ್ಷ ಪ್ರಾಯದ ಮಗುವಿನೊಂದಿಗೆ ಜೂ 26 ರಂದು ಅಪರಾಹ್ನ 11 ಗಂಟೆ ಸಮಯದಲ್ಲಿ ನಲ್ಲೂರಿನ ಅಂಗನವಾಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟು ಇದುವರೆಗೂ ಮನೆಗೆ ವಾಪಸಾಗಿಲ್ಲ. ಆಕೆ ಅಂಗನವಾಡಿಗೂ ಕೂಡ ಹೋಗಿಲ್ಲ ಎಂದು ತಿಳಿದು ಬಂದಿದೆ.
ನಾಪತ್ತೆಯಾಗಿರುವ ತಾಯಿ ಮಗುವನ್ನು ಯಾರಾದರೂ ಕಂಡಲ್ಲಿ ಕೂಡಲೇ ಪೆÇನ್ನಂಪೇಟೆ ಪೆÇಲೀಸ್ ಠಾಣೆಯ ದೂರವಾಣಿ ಸಂಖ್ಯೆ 08274-249044 ಅಥವಾ 9480804959 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪಿ.ಎಸ್.ಐ ಡಿ.ಕುಮಾರ್ ತಿಳಿಸಿದ್ದಾರೆ.