ಶನಿವಾರಸಂತೆ, ಜೂ. 30: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೆಹಳ್ಳಿ ಗ್ರಾಮದ ತಿರುವು ರಸ್ತೆಯಲ್ಲಿ ತಾ. 29 ರಂದು ಬೆಳಿಗ್ಗೆ ಕಾರು (ಕೆಎ 02 ಎಂಕೆ 6511) ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತವಾಗಿದ್ದು, ಕಾರು ಪೂರ್ಣ ಜಖಂಗೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶನಿವಾರಸಂತೆಯಿಂದ ಬಿ.ಎಸ್. ಯೋಗೇಶ್ ತಮ್ಮ ಕಾರಿನಲ್ಲಿ ವ್ಯವಹಾರ ನಿಮಿತ್ತ ಚಂಗಡಹಳ್ಳಿಗೆ ಹೋಗಿ ವಾಪಾಸ್ ಮನೆಗೆ ಬರುತ್ತಿರುವಾಗ ಎಡೆಹಳ್ಳಿ ಗ್ರಾಮದ ತಿರುವು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಕಾರು ಅಪಘಾತವಾಗಿದ್ದು, ಕಾರು ಸಂಪೂರ್ಣ ಜಖಂ ಗೊಂಡಿದೆ.
ಕಾರಿನೊಳಗಡೆ ಇದ್ದವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಚಾಲಕರ ಸಂಬಂಧಿ ಆರ್.ಎಂ. ಭುವನ್ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರವಿಚಂದ್ರ ಕಾರನ್ನು ವಶಪಡಿಸಿಕೊಂಡು ಕಾಲಂ 279 ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.