ಶ್ರೀಮಂಗಲ, ಜೂ. 29: ವ್ಯಾಪಕವಾಗಿ ಕೊರೊನಾ ಸೊಂಕು ಹರಡುತ್ತಿರುವ ಹಿನೆÀ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗಿನ ಗಡಿಪ್ರದೇಶವಾದ ಕುಟ್ಟ ಪಟ್ಟಣದಲ್ಲಿ ವಾರದ ಮಂಗಳವಾರ ಹಾಗೂ ಭಾನುವಾರ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಲಾಕ್ಡೌನ್ ಮಾಡಲು ಸ್ಥಳೀಯ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರವನ್ನು ಕುಟ್ಟ ಗ್ರಾ.ಪಂ. ವ್ಯಾಪ್ತಿಗೆ ಅನ್ವಯಿಸುವಂತೆ ಕೈಗೊಳ್ಳಲಾಗಿದೆ.
ಕುಟ್ಟ ಮಸೀದಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ತಾ. 30ರಂದು (ಇಂದು) ಕುಟ್ಟದಲ್ಲಿ ನಡೆಯುವ ಸಂತೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೇ ವಾರದ ಇತರ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕುಟ್ಟ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹೋಂ ಸ್ಟೇಗಳನ್ನು ಸೋಮವಾರದಿಂದ ಅನ್ವಯವಾಗುವಂತೆ ಮುಂದಿನ ಮೂರು ವಾರದ ವರೆಗೆ ಮುಚ್ಚುವುದಾಗಿ ಸಭೆಯಲ್ಲಿ ಹಾಜರಿದ್ದ ಹೋಂ ಸ್ಟೇ ಮಾಲೀಕರು ತಮ್ಮ ಸ್ವಯಂ ನಿರ್ಧಾರವನ್ನು ಪ್ರಕಟಿಸಿದರು.
ಪೆÇಲೀಸ್ ಇಲಾಖೆಯ ಪರವಾಗಿ ಸಭೆಯಲ್ಲಿ ಹಾಜರಿದ್ದ ಎ.ಎಸ್.ಐ ಮೊಹಿದ್ದೀನ್ ಅವರು ಮಾತನಾಡಿ ನಾಗರಿಕರು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಬೇಕು. ಇಲ್ಲದಿದ್ದರೆ 200 ರೂ. ದಂಡ ವಿಧಿಸಲಾಗುವುದು. ಈ ನಿಟ್ಟಿನಲ್ಲಿ ಕುಟ್ಟ ವ್ಯಾಪ್ತಿಯಲ್ಲಿ ಪೆÇಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಕೇರಳದಿಂದ ಗಡಿಗೇಟ್ ಮೂಲಕ ಜಿಲ್ಲೆಗೆ ಪ್ರವೇಶಿಸುವುದು ಅಥವಾ ಕೇರಳಕ್ಕೆ ತೆರಳುವುದನ್ನು ತಡೆಗಟ್ಟಲು ರಸ್ತೆಗೆ ಮಣ್ಣು ಹಾಕಿ ತಡೆ ಮಾಡಲಾಗಿದೆ. ಆದರೂ ರಸ್ತೆ ಮೂಲಕ ತೆರಳಲು ಪ್ರಯತ್ನಿಸುವವರನ್ನು ತಡೆಯಲು ಗಡಿಗೇಟಿನಲ್ಲಿ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕುಟ್ಟ ವರ್ತಕರ ಸಂಘದ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಪಿ.ಡಿ.ಒ. ಹೆಚ್.ಎಸ್ ಅನಿಲ್ ಕುಮಾರ್, ಸದಸ್ಯರಾದ ಹೆಚ್.ವೈ. ರಾಮಕೃಷ್ಣ, ತೀತಿರ ರುಕ್ಮಿಣಿ, ಹೋಂ ಸ್ಟೇ ಮಾಲೀಕರಾದ ಮಚ್ಚಮಾಡ ಪ್ರಕಾಶ್, ತೀತಿರ ಕಬೀರ್, ತೀತಿರ ರಾಜ ಮತ್ತಿತರರು ಭಾಗವಹಿಸಿದ್ದರು.