ಕೂಡಿಗೆ, ಜೂ. 29: ನಿನ್ನೆ ದೈವಾಧೀನರಾದ ನಾಡೋಜ ಗೀತಾ ನಾಗಭೂಷಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಕಸಾಪದಿಂದ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಸ್ಥಳೀಯರಾದ ಆಶಾ ಸುಲೋಚನ, ಸುಶೀಲಾ, ಪ್ರೇಮ ಶ್ವೇತ ಇದ್ದರು.