ಮಡಿಕೇರಿ, ಜೂ. 29 : ಮೇಯುವ ಸಂದರ್ಭ ಪಾಳುಬಾವಿಗೆ ಬಿದ್ದ ಹಸುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.
ಐಟಿಐ ಕಾಲೇಜು ರಸ್ತೆ ಸಮೀಪದ ಪಾಳುಬಿದ್ದ ಬಾವಿಗೆ ಬೀಡಾಡಿ ಹಸುವೊಂದು ಮೇಯುವ ಸಂದರ್ಭ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯ ಯುವಕರು ನಿವಾಸಿಗಳಿಗೆ ತಿಳಿಸಿ ಬಳಿಕ ಮೈತ್ರಿ ಭವನದಲ್ಲಿ ಇದ್ದ ಎನ್‍ಡಿಆರ್‍ಎಫ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಅಗ್ನಿಶಾಮಕ ದಳದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹಸುವನ್ನು ಮೇಲೆತ್ತಲಾಯಿತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಗೆ ಕೈಜೋಡಿಸಿದರು.