ಸೋಮವಾರಪೇಟೆ, ಜೂ. 29: ಪಟ್ಟಣ ಸಮೀಪದ ಕಂಟೈನ್ ಮೆಂಟ್ ಏರಿಯಾದೊಳಗೆ ಮದ್ಯಪಾನಿಗಳಿಂದ ರಂಪಾಟ ನಡೆದಿದ್ದು, ಗ್ರಾ.ಪಂ. ಸದಸ್ಯೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆಯಾಗಿರುವ ಬಗ್ಗೆ ಸೋಮವಾರಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕರ್ಕಳ್ಳಿ ಬಳಗುಂದ ಗ್ರಾಮವನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ನಿಯಂತ್ರಿತ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಲಾಗಿದೆ.
ಆದರೂ ಸಹ ಕೆಲವರು ಗ್ರಾಮದಲ್ಲಿ ಓಡಾಡುತ್ತಿದ್ದು, ಇಂತಹ ಮಂದಿಗೆ ಬುದ್ದಿವಾದ ಹೇಳಿದ ಗ್ರಾ.ಪಂ. ಸದಸ್ಯೆಯ ವಿರುದ್ಧ ಸಂಜೆ ವೇಳೆಗೆ ಈರ್ವರು ಮದ್ಯಪಾನಿಗಳು ಗಲಾಟೆ ತೆಗೆದು ಆಕೆಯೂ ಸೇರಿದಂತೆ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೆÇಲೀಸರಿಗೆ ದೂರು ನೀಡಲಾಗಿದೆ.
ಕೊರೊನಾ ಹಿನ್ನೆಲೆ ಕಂಟೈನ್ಮೆಂಟ್ ಏರಿಯಾ ಆಗಿರುವ ಕರ್ಕಳ್ಳಿ ಬಳಗುಂದ ಗ್ರಾಮದಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯೆ ಸುಭದ್ರ ಅವರು ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದು, ಅನಗತ್ಯವಾಗಿ ಹೊರಗಡೆ ಓಡಾಡದಂತೆ ಕೆಲವರಿಗೆ ಕಿವಿಮಾತು ಹೇಳಿದ್ದಾರೆ.
ಇವರ ಮಾತಿಗೆ ಬಗ್ಗದ ಕೆಲ ಯುವಕರು ಮತ್ತದೇ ಓಡಾಟ ಮುಂದುವರೆಸಿದ್ದು, ಅಂತಿಮವಾಗಿ ಪೆÇಲೀಸ್ ಸಿಬ್ಬಂದಿಗಳು ಆಗಮಿಸಿ, ಗುಂಪನ್ನು ಚದುರಿಸಿ, ಮನೆಯಿಂದ ಅನಗತ್ಯವಾಗಿ ಹೊರಬಾರದಂತೆ ತಾಕೀತು ಮಾಡಿದ್ದಾರೆ.
ಇದನ್ನೇ ಕಾರಣವಾಗಿಟ್ಟುಕೊಂಡ ಈರ್ವರು ಯುವಕರು, ಸಂಜೆ ವೇಳೆಗೆ ಮದ್ಯಪಾನ ಮಾಡಿ ಸುಭದ್ರ ಅವರ ಮನೆಗೆ ಆಗಮಿಸಿ, “ಪೆÇಲೀಸರನ್ನು ಕರೆಸಿ ನಮಗೆ ಹೊಡೆಸಿದ್ದೀಯ” ಎಂದು ತಗಾದೆ ತೆಗೆದು, ಗ್ರಾ.ಪಂ. ಸದಸ್ಯೆ ಸೇರಿದಂತೆ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರೊದಿಗೆ ಮನೆಯ ಗೇಟ್ ಗೂ ಹಾನಿ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗ್ರಾ.ಪಂ. ಸದಸ್ಯೆ ಸೋಮವಾರಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. -ವಿಜಯ್