ಸಿದ್ದಾಪುರ, ಜೂ. 27: ಪಡಿತರ ಚೀಟಿಯ ಅಕ್ಕಿಯನ್ನು ಪಡೆದು ಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಆಹಾರ ಇಲಾಖಾ ಅಧಿಕಾರಿಗಳು ದಾಳಿ ಮಾಡಿ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಸಿಗುವ ಅನ್ನ ಭಾಗ್ಯ ಯೋಜನೆಯಡಿಯ ಅಕ್ಕಿಯನ್ನು ಪಡೆದುಕೊಂಡು ಬೇರೆಡೆಗೆ ಮಿನಿ ಲಾರಿಯೊಂದರಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ವೀರಾಜಪೇಟೆ ತಾಲೂಕಿನ ಆಹಾರ ನಿರೀಕ್ಷಕ ಚಂದ್ರ ನಾಯಕ್ ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದಾರೆ. (ಮೊದಲ ಪುಟದಿಂದ) ಈ ಸಂಬಂಧ ಸಿದ್ದಾಪುರ ಪೆÇಲೀಸ್ ಠಾಣೆಗೆ ಚಂದ್ರ ನಾಯಕ್ ದೂರು ನೀಡಿದ್ದು, ದೂರಿನ ಮೇರೆಗೆ ಸ್ಥಳೀಯ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪಡಿತರ ಅಕ್ಕಿಯನ್ನು ಸಾಗಾಟ ಮಾಡುವ ಆರೋಪದಡಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಶೀದ್ ಎಂಬಾತನ ಮೇಲೆ ಆಹಾರ ಇಲಾಖಾ ಅಧಿಕಾರಿಗಳು ದೂರು ನೀಡಿದ ಮೇರೆಗೆ ದೂರು ದಾಖಲಿಸಿಕೊಂಡು ಪೆÇಲೀಸರು ಹಾಗೂ ಆಹಾರ ಇಲಾಖಾ ಅಧಿಕಾರಿಗಳು ವಾಹನ ಸಮೇತ ಅಂದಾಜು 2 ಟನ್ ಅಕ್ಕಿ ಹಾಗೂ ಸಾಗಾಟ ಮಾಡಲು ಯತ್ನಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.