ವೀರಾಜಪೇಟೆ: ಭಾರತ-ಚೀನಾ ಗಡಿಯಲ್ಲಿ ವೀರಮರಣ ಹೊಂದಿದ 20 ಯೋಧರಿಗೆ ಇಲ್ಲಿನ ಅಮರ್ ಜವಾನ್ ಸ್ಮಾರಕ ಎದುರು ನಗರ ಬಿ.ಜೆ.ಪಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ಡಾಲಿ ಸ್ಮಾರಕಕ್ಕೆ ಪುಪ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು.
ಇದೇ ಸಂದಭsರ್À ನಗರ ಬಿಜೆಪಿ ಅಧ್ಯಕ್ಷ ಅನಿಲ್ ಮಂದಣ್ಣ, ಸಂಘ ಪರಿವಾರದ ಎನ್.ಪಿ ದಿನೇಶ್, ಹೇಮಂತ್, ನಾಗೇಶ್, ಟಿ.ಪಿ ಕೃಷ್ಣ, ಸಾಯಿನಾಥ್ ನಾಯಕ್, ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು. ಪೆÇನ್ನಂಪೇಟೆ: ಇತ್ತೀಚೆಗೆ ಪೂರ್ವ ಲಡಾಖ್ ಗಡಿಯಲ್ಲಿನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತೀಯ ಸೇನಾ ಪಡೆಗಳ ನಡುವಿನ ಘರ್ಷಣೆಯಲ್ಲಿ ದೇಶ ರಕ್ಷಣೆಯ ಸಂದರ್ಭ ಹುತಾತ್ಮರಾದ 20 ಭಾರತೀಯ ಯೋಧರಿಗೆ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ವತಿಯಿಂದ ಮೌನಾ ಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ನಡೆದ ಸಭೆಯಲ್ಲಿ ಚೀನಾ ವಸ್ತುಗಳನ್ನು ತಿರಸ್ಕರಿಸಿ, ಸ್ವದೇಶಿ ವಸ್ತುಗಳು ಪುರಸ್ಕರಿಸಿ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಜಗತ್ತಿಗೆ ಮಹಾಮಾರಿ ಕೊರೊನಾ ವೈರಸ್ ಅನ್ನು ಕೊಡುಗೆ ನೀಡಿ, ಲಕ್ಷಾಂತರ ಜನರ ಸಾವಿಗೆ ಕಾರಣವಾದ ಚೀನಾ, ಗಡಿಯಲ್ಲಿ ಕ್ಯಾತೆ ತೆಗೆದು ಪದೇಪದೇ ಗಡಿ ಒಳಗೆ ನುಗ್ಗುವ ಮೂಲಕ ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಿ, ತನ್ನ ಕುತಂತ್ರ ಬುದ್ಧಿಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಭಾರತದ ಗಡಿ ಕಾಪಾಡುವ ಯೋಧರ ಜತೆ ನಾವೆಲ್ಲರೂ ಒಂದಾಗಿದ್ದೇವೆ. ಭಾರತೀಯರು ಸ್ನೇಹ ಜೀವಿಗಳು. ಎಂದಿಗೂ ಯುದ್ಧ ಬಯಸಿದವರಲ್ಲ. ಆದರೆ ಚೀನಾ ಹಿಂಬಾಗಿಲಿನಿಂದ ಬಂದು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ. ಚೀನೀ ಸೈನಿಕರಿಗಿಂತ ಭಾರತದ ಸೈನ್ಯ ಬಲಿಷ್ಠವಾಗಿದೆ. ಮುಂಬರುವ ದಿನಗಳಲ್ಲಿ ಭಾರತಕ್ಕೆ ಆಮದಾಗುವ ಎಲ್ಲ ಚೀನಿ ಸಾಮಗ್ರಿಗಳನ್ನು ಭಾರತೀಯರು ಬಹಿಷ್ಕರಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮನ್ನೇರಾ ರಮೇಶ್, ಗೌರವ ಕಾರ್ಯದರ್ಶಿ ಎಸ್. ಗಣಪತಿ, ಖಜಾಂಚಿ ಎಂ. ಸತೀಶ್ ಸದಸ್ಯರಾದ ಎ.ಪಿ. ಮೋಟಯ್ಯ, ಎಂ.ಎಸ್. ಕುಶಾಲಪ್ಪ, ಸಿ.ಎಂ. ಗೋಕುಲ (ಅರಸು ), ಸಿ.ಸಿ. ಪುಣ್ಯವತಿ, ಕೆ.ಬಿ. ಪಾರ್ವತಿ ಬೋಪಯ್ಯ, ಎಂ.ಬಿ. ಸುರೇಶ್, ಎಂ.ಎಂ. ಬೆಳ್ಳಿಯಪ್ಪ, ಐ.ಸಿ. ನಂಜಪ್ಪ ಇನ್ನಿತರರು ಇದ್ದರು.