ಗುಡ್ಡೆಹೊಸೂರು, ಜೂ. 28: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ಆವರಣದಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರು ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಕಟ್ಟಡವು 21ಲಕ್ಷ ಹಣದಲ್ಲಿ ನಿರ್ಮಾಣವಾಗಲಿದೆ.
ಈ ಸಂದರ್ಭ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಉಪಾಧ್ಯಕ್ಷ ಮನು, ನಿರ್ದೇಶಕರಾದ ಸುರೇಶ್, ಉದಯಕುಮಾರ್, ಮಹೇಶ್, ಅಣ್ಣಯ್ಯ ಯಶೋಧ, ಕಮಲ ಹಾಜರಿದ್ದರು. ಅಲ್ಲದೆ ತಾಲೂಕು ಪಂಚಾಯ್ತಿ ಸದಸ್ಯೆ ಪುಷ್ಪ, ಗ್ರಾ.ಪಂ. ಸದಸ್ಯೆಯರಾದ ಕವಿತಾ, ಡಾಟಿ, ತಾಲೂಕು ಸೋಲಿಗ ಸಂಘದ ಅಧ್ಯಕ್ಷ ಕುಮಾರ ಮತ್ತು ತಾಲೂಕು ಗಿರಿಜನ ಅಭಿವೃದ್ಧಿ ನಾಮ ನಿರ್ದೇಶಕರಾದ ಬಿ.ಕೆ. ಮೋಹನ್, ಪ್ರಭಾಕರ ಹಾಗೂ ಆರ್.ಎಂ.ಸಿ. ನಿರ್ದೇಶಕರಾದ ಸಿ.ಪಿ. ವಿಜಯ ಮತ್ತು ಗುಡ್ಡೆಹೊಸೂರು ಬಿ.ಜೆ.ಪಿ. ಮುಖಂಡ ಎಂ.ಆರ್. ಉತ್ತಪ್ಪ ಹಾಗೂ ಲ್ಯಾಂಪ್ಸ್ ಮಹಾಮಂಡಳಿಯ ಅಧ್ಯಕ್ಷ ಮುದ್ದಯ್ಯ ಮತ್ತು ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.