ಶನಿವಾರಸಂತೆ, ಜೂ. 28: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಮಾಸಿಕ ಸಭೆ ಕಚೇರಿಯ ಸಭಾಂಗಣ ದಲ್ಲಿ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್. ನಿರಂಜನ್ ಮಾತನಾಡಿ, ನೂತನ ಸದಸ್ಯತ್ವದ ಬಗ್ಗೆ ಮಾಹಿತಿ ನೀಡಿ, ಅಂತರರಾಷ್ಟ್ರೀಯ ಜಿಲ್ಲಾ ಸಂಸ್ಥೆಯ ವಂತಿಕೆ ಪಾವತಿಸುವ ಕಾಲಾವಧಿ ಸಮೀಪಿಸುತ್ತಿರುವ ಬಗ್ಗೆ ಸದಸ್ಯರ ಗಮನಕ್ಕೆ ತಂದರು. ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಈಗಾಗಲೇ ಲಯನ್ಸ್ ಕ್ಲಬ್‍ನ 2019-20ನೇ ಸಾಲಿನ ಅವಧಿ ಮುಗಿಯುತ್ತಾ ಬಂದಿದ್ದು, 2020-21ನೇ ಸಾಲಿಗೆ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿ ಅವರುಗಳ ಹೆಸರುಗಳನ್ನು ಜಿಲ್ಲಾ ಲಯನ್ಸ್ ಕ್ಲಬ್‍ಗೆ ಕಳುಹಿಸಬೇಕಾಗಿದೆ. ಹಾಜರಿದ್ದ ಲಯನ್ಸ್ ಸದಸ್ಯರುಗಳ ಕೋರಿಕೆಯಂತೆ ನೂತನ ಅಧ್ಯಕ್ಷರಾಗಿ ಬಿ.ಸಿ. ಧರ್ಮಪ್ಪ, ಕಾರ್ಯದರ್ಶಿ ಯಾಗಿ ಎಂ.ಆರ್. ನಿರಂಜನ್, ಖಜಾಂಚಿಯಾಗಿ ಬಿ.ಕೆ. ಚಿಣ್ಣಪ್ಪ ಅವರುಗಳ ಹೆಸರನ್ನು ಕಳುಹಿಸುವಂತೆ ತೀರ್ಮಾನಿಸಲಾಯಿತು.
ಮುಂದಿನ ಸಾಲಿನ ಅಂತರರಾಷ್ಟ್ರೀಯ, ಜಿಲ್ಲೆ ಮತ್ತು ಮಲ್ಟಿಪಲ್ ವಂತಿಗೆಯನ್ನು ತಾ. 30 ರಂದು ಪಾವತಿಸುವಂತೆ ಸದಸ್ಯರನ್ನು ಕೋರಿದರು.
ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಬಿ.ಸಿ. ಧರ್ಮಪ್ಪ, ಜಿ. ನಾರಾಯಣ ಸ್ವಾಮಿ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಸಿ.ಪಿ. ಹರೀಶ್, ಜಿ.ಬಿ. ಪರಮೇಶ್, ಕೆ.ಎನ್. ಕಾರ್ಯಪ್ಪ, ಕೆ.ಎಂ. ಜಗನ್‍ಪಾಲ್, ಎಸ್.ಜಿ. ನರೇಶ್‍ಚಂದ್ರ, ಎಸ್.ಎಸ್. ಚಂದ್ರಶೇಖರ್ ಇತರರು ಇದ್ದರು. ಜಿ. ನಾರಾಯಣ ಸ್ವಾಮಿ ಧ್ವಜವಂದನೆ ಮಾಡಿದರು. ಸ್ವಾಗತಿಸಿದ ಎಂ.ಆರ್. ನಿರಂಜನ್ ವರದಿ ಮಂಡಿಸಿ, ನಿರೂಪಣೆ ಮಾಡಿದರು. ಎನ್.ಕೆ. ಅಪ್ಪಸ್ವಾಮಿ ವಂದಿಸಿದರು.