ಸೋಮವಾರಪೇಟೆ,ಜೂ.28: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಜಾಗೃತಿ ಮೂಡಿಸಿದ ಕಿರಗಂದೂರು ಹಾಗೂ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಮಂದಿ ಆಶಾ ಕಾರ್ಯಕರ್ತೆಯರನ್ನು ತಲಾ ರೂ. 3 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸಮನ್ವಯ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಡಿ.ಎಸ್. ಚಂಗಪ್ಪ ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು ಶ್ರಮಿಸಿ, ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಯರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಾದ ಬಿ.ಬಿ. ಭವಾನಿ, ಎಸ್. ಇಂದಿರಾ, ಅಮುದ, ಎನ್. ಎಂ. ಪುಷ್ಪಾವತಿ, ಎಂ. ಜಾನಕಿ, ಎನ್. ಕೆ. ಚಿತ್ರ, ಶಿಲ್ಪ ಹಾಗೂ ಲಲಿತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ, ಉಪಾಧ್ಯಕ್ಷ ಕೆ.ಪಿ. ರೋಷನ್ ನಿರ್ದೇಶಕರಾದ ವಿಶ್ವನಾಥರಾಜೇ ಅರಸ್, ಡಿ.ಎಸ್. ಚಂಗಪ್ಪ, ಹೆಚ್.ಬಿ. ಶಿವಕುಮಾರ್, ಡಿ. ಕೆ. ಪೂವಯ್ಯ, ಎಲ್. ಎಂ. ರಾಜೇಶ್, ಡಿ. ಸಿ. ಸಬಿತ, ಎಸ್. ಜಿ. ರಾಣಿ, ಬಿ. ಸಿ. ಸುನೀಲ್, ಹೆಚ್. ಜೆ. ಬಸಪ್ಪ, ಜೆ. ಹೆಚ್. ರಾಜು, ಎಸ್.ಕೆ. ರಘು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.