ಕುಶಾಲನಗರ, ಜೂ. 27: ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ಹೈಕಮಾಂಡ್ ಅನುಮತಿಯಿಲ್ಲದೆ ಮುಂಚೂಣಿ ಘಟಕಗಳ ಪದಾಧಿಕಾರಿಗಳ ನೇಮಕ ಮಾಡಿರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತಡೆಹಿಡಿದಿದೆ.

ಕೆಪಿಸಿಸಿ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಜುಲೈ 2 ರಂದು ಆಯೋಜಿಸಲಾಗಿದ್ದು ಈ ನಡುವೆ ಕೆಪಿಸಿಸಿ ಅನುಮೋದನೆಯಿಲ್ಲದೆ ಯಾವುದೇ ಹೊಸ ನೇಮಕಾತಿ ಮಾಡುವ ಅವಕಾಶವಿಲ್ಲ ಮತ್ತು ಇತ್ತೀಚೆಗೆ ಮಾಡಿದ ಎಲ್ಲಾ ನೇಮಕಾತಿಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಕಾರ್ಯಾಧ್ಯಕ್ಷ ಈಶ್ವರ್ ಬಿ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.