ಮಡಿಕೇರಿ, ಜೂ.27: ವೀರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯದ ವ್ಯಾಪ್ತಿಯಲ್ಲಿ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ನಂದಿ ಜಾತಿಯ ಮರಗಳ ವಿವಿಧ ಅಳತೆಯ 11 ನಾಟಗಳನ್ನು ಸಾಗಿಸುವ ಸಂದರ್ಭದಲ್ಲಿ 2019 ರ ಮಾರ್ಚ್ 11 ರಂದು ಮೊಕದ್ದಮೆ ಸಂಖ್ಯೆ: 30/2018-19ನ್ನು ದಾಖಲಿಸಿ ವಾಹನ ನೋಂದಣಿ ಸಂಖ್ಯೆ: ಕೆಎಲ್-04-ಎಲ್-9371ರ ಲಾರಿ ವಾಹನ (ಇಂಜಿನ್ ಸಂಖ್ಯೆ: ಇ483ಂ20980054 ಮತ್ತು ಚಾಸಿಸ್ ಸಂಖ್ಯೆ: 17ಇಅ20985298)ನ್ನು ಮತ್ತು ಸ್ವತ್ತುಗಳನ್ನು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡಿದ್ದು, ಈವರೆಗೂ ಸದರಿ ವಾಹನದ ಬಗ್ಗೆ ಯಾರಿಂದಲೂ ಹಕ್ಕುಬಾಧ್ಯತೆ ಇರುವುದಿಲ್ಲ. ಆದುದರಿಂದ ಸದರಿ ವಾಹನದ ನಿಜವಾದ ಮಾಲೀಕರು ಯಾರಾದರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅಹವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ವಿಭಾಗ, ವೀರಾಜಪೇಟೆ ಇವರಿಗೆ ಸಲ್ಲಿಸಬೇಕಾಗಿದೆ.

ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ, 1963 ರ ವಿಧಿ 71 (ಎ) ಯಿಂದ (ಜಿ) ಪ್ರಕಾರ ನೊಂದಣಿ ಸಂಖ್ಯೆ ಏಐ-04-ಐ-9371 ಲಾರಿಯ ಇಂಜಿನ್ ಸಂಖ್ಯೆ ಇ483ಂ20980054 ಚಾಸಿಸ್ ಸಂಖ್ಯೆ 17ಇಅ20985298 ನ್ನು ಅಮಾನತ್ತು ಪಡಿಸಿದ ಸ್ವತ್ತು ನಂದಿ ಜಾತಿಯ ಮರಗಳ ವಿವಿಧ ಅಳತೆಯ 11 ನಾಟ ಸದರಿ ವಾಹನವನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.