ಮಡಿಕೇರಿ, ಜೂ. 28: ಇಲ್ಲಿನ ಜಿಲ್ಲಾ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19 ಆಸ್ಪತ್ರೆಯ ಆರ್.ಎಂ.ಓ. ಆಗಿ ಡಾ. ರೂಪೇಶ್ ಗೋಪಾಲ್ ಅವರನ್ನು ನೇಮಿಸಲಾಗಿದೆ. ಡಾ. ಮಂಜುನಾಥ್ ಅವರ ಬದಲಿಗೆ ಈ ನೇಮಕಾತಿಯೊಂದಿಗೆ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದ್ದಾರೆ.