ಕೊಡ್ಲಿಪೇಟೆ, ಜೂ.28: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ, ಕಂಟೈನ್‍ಮೆಂಟ್ ಏರಿಯಾ ಘೋಷಣೆಯಾಗಿರುವ ಹಿನ್ನೆಲೆ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದ್ದ ಭಾನುವಾರದ ಸ್ವಯಂಪ್ರೇರಿತ ಲಾಕ್‍ಡೌನ್ ಕೊಡ್ಲಿಪೇಟೆಯಲ್ಲಿ ಯಶಸ್ವಿ ಯಾಯಿತು.ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬಾರ್‍ಗಳು ಎಂದಿನಂತೆ ತೆರೆದಿದ್ದವು. ಅತೀ ಅಗತ್ಯ ಸೇವೆಗಳಲ್ಲಿ ಒಂದಾದ ಮೆಡಿಕಲ್ ಅಂಗಡಿಗಳು ತೆರೆಯಲ್ಪಟ್ಟು ಸಾರ್ವಜನಿಕರಿಗೆ ಸೇವೆ ಒದಗಿಸಿದವು.ಕೊಡ್ಲಿಪೇಟೆ, ಜೂ.28: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ, ಕಂಟೈನ್‍ಮೆಂಟ್ ಏರಿಯಾ ಘೋಷಣೆಯಾಗಿರುವ ಹಿನ್ನೆಲೆ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದ್ದ ಭಾನುವಾರದ ಸ್ವಯಂಪ್ರೇರಿತ ಲಾಕ್‍ಡೌನ್ ಕೊಡ್ಲಿಪೇಟೆಯಲ್ಲಿ ಯಶಸ್ವಿ ಯಾಯಿತು.

ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬಾರ್‍ಗಳು ಎಂದಿನಂತೆ ತೆರೆದಿದ್ದವು. ಅತೀ ಅಗತ್ಯ ಸೇವೆಗಳಲ್ಲಿ ಒಂದಾದ ಮೆಡಿಕಲ್ ಅಂಗಡಿಗಳು ತೆರೆಯಲ್ಪಟ್ಟು ಸಾರ್ವಜನಿಕರಿಗೆ ಸೇವೆ ಒದಗಿಸಿದವು.ಸಂಸ್ಥೆಗಳ ಪದಾಧಿಕಾರಿಗಳು, ವಾರದ ಇತರ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಿ, ಮಧ್ಯಾಹ್ನ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವದು, ಭಾನುವಾರದಂದು ಬೆಳಗ್ಗಿನಿಂದ ಸಂಜೆಯವರೆಗೂ ಸಂಪೂರ್ಣ ಲಾಕ್‍ಡೌನ್ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು. ಅದರಂತೆ ಇಂದು ಬೆಳಗ್ಗಿನಿಂದ ಸಂಜೆಯವರೆಗೂ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. -ಧರ್ಮ