ಮಡಿಕೇರಿ, ಜೂ. 27: ಕೂರ್ಗ್ ಗಾಲ್ಫ್ ಲಿಂಕ್ಸ್, ಬಿಟ್ಟಂಗಾಲ, ಪಾಲಜಾನ್ ರೆಸಾರ್ಟ್ ಮತ್ತು ಹೊಟೇಲ್, ಪ್ರೈ.ಲಿ., ಮೇಕೇರಿ ಮತ್ತು ಸಿ.ಬಿ. ತಮ್ಮಯ್ಯ, ಸಪ್ತಗಿರಿ ಬಾರ್ ಮತ್ತು ರೆಸ್ಟೋರೆಂಟ್, ಕುಟ್ಟ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಅವರ ಸಹಯೋಗದೊಂದಿಗೆ ಒಟ್ಟು 3 ಗಂಟಲು ದ್ರವ ಸಂಗ್ರಹಣಾ ಆರೋಗ್ಯ ಕಿಯೋಸ್ಕ್‍ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬುಧವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಎಸ್. ಗೋಪಿನಾಥ್, ಮಡಿಕೇರಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಲಕ್ಷ್ಮೀಶ್, ಜಯಪಾಲ್, ಹರೀಶ್, ಸಿ.ಬಿ. ತಮ್ಮಯ್ಯ, ನರೇಂದ್ರ ಕುಟ್ಟ ಇತರರು ಹಾಜರಿದ್ದರು.