ಮಡಿಕೇರಿ, ಜೂ. 27: ಇಲ್ಲಿಗೆ ಸಮೀಪದ ಅರ್ವತೋಕ್ಲು ಗ್ರಾಮದಲ್ಲಿ ಆರು ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಅರ್ವತ್ತೋಕ್ಲುವಿನ ಮುಂಜಾಂದಿರ ರಾಜ ಹಾಗೂ ಗಣೇಶ್ ಎಂಬವರಿಗೆ ಸೇರಿದ ತೋಟಕ್ಕೆ ನಿನ್ನೆ ರಾತ್ರಿ ದಾಳಿಯಿಟ್ಟ ಕಾಡಾನೆಗಳು ತೋಟದಲ್ಲಿದ್ದ ಹಲಸು, ಬಾಳೆಯನ್ನು ತಿಂದು ಸನಿಹದಲ್ಲೇ ಇರುವ ಕೆರೆಯಿಂದ ನೀರು ಕುಡಿದು ತೆರಳಿರುವುದಾಗಿ ರಾಜ ಅವರು ಮಾಹಿತಿ ನೀಡಿದ್ದಾರೆ.