ಮಡಿಕೇರಿ, ಜೂ. 26: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಲಕ್ಷಣದೊಂದಿಗೆ, ಇಂದು ಹೊಸ ಆರು ಪ್ರಕರಣ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 36 ಕೊರೊನಾ ಸೋಂಕಿತರೊಂದಿಗೆ ಮೂವರು ಗುಣಮುಖರಾಗಿದ್ದಾರೆ. ಪ್ರಸ್ತುತ 33 ಮಂದಿ ಕೋವಿಡ್ - 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಜಿಲ್ಲಾಡಳಿತ ಕೊಡಗಿನ 18 ಕಡೆಗಳಲ್ಲಿ 330ಕ್ಕೂ ಅಧಿಕ ಕುಟುಂಬಗಳಿಗೆ ಸಾರ್ವಜನಿಕ ಸಂಪರ್ಕ ತಡೆಯೊಂದಿಗೆ ನಿರ್ಬಂಧ ಪ್ರದೇಶವೆಂದು ಘೋಷಿಸಿದೆ.‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ 28 ದಿನ ಸೋಂಕಿತರ ಸಂಬಂಧಿಕರ ಸಹಿತ, ಯಾರೊಬ್ಬರು ಮನೆಗಳಿಂದ ಹೊರಬರದಂತೆ ಜಿಲ್ಲೆಯ 18 ಕಡೆ ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಠಾಣೆಗೂ ಸಾರ್ವಜನಿಕ ಸಂಪರ್ಕವನ್ನು ತಡೆಹಿಡಿದ ದೃಶ್ಯ ಗೋಚರಿಸಿತು. ಠಾಣೆಗೆ ಒಂದು ದ್ವಾರದಿಂದ ಮಾತ್ರ ಪ್ರವೇಶದೊಂದಿಗೆ ಸ್ಯಾನಿಟೈಸರ್, ಸ್ಕ್ರೀನಿಂಗ್ ಸಹಿತ ಬಂದು ಹೋಗುವ ಮಂದಿಯ ಮೇಲೆ ನಿಗಾ ವಹಿಸಿರುವದು ಕಂಡು ಬಂತು. ಮುಂಜಾಗ್ರತಾ ದೃಷ್ಟಿಯಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ.
ಆರು ಕಡೆ ಬೀಗ
ಮಡಿಕೇರಿ ನಗರಸಭೆ ಬಳಿ ಒಂದು ಹೊಟೇಲ್, ಫಿಜಾó ಮಳಿಗೆ, ಚೌಕ್ ಬಳಿ ಶೂ ಮಳಿಗೆ, ಮಾಂಸ ಮಾರಾಟ ಮಳಿಗೆ ಹಾಗೂ ಸೂಪರ್ ಮಾರ್ಕೆಟ್, ರೆಸ್ಟೋರೆಂಟ್ವೊಂದಕ್ಕೂ ಬೀಗ ಹಾಕಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರ ಭೇಟಿಯ ಕಾರಣ ಈ ಕ್ರಮ ಜರುಗಿಸಲಾಗಿದೆ. ಜಿಲ್ಲಾಡಳಿತದಿಂದ ಸಾರ್ವಜನಿಕ ಸಂಪರ್ಕ ತಡೆ ಇರುವವರೆಗೆ ಅಗತ್ಯ ವಸ್ತುಗಳ ಪೂರೈಕೆಯೊಂದಿಗೆ ಎಲ್ಲಾ ರೀತಿ ಕ್ರಮಕೈಗೊಳ್ಳಲಾಗಿದೆ.
ಇನ್ನು ಮಡಿಕೇರಿ ನಗರದ ಆರು ಕಡೆಗಳಲ್ಲಿ ಇದೇ ರೀತಿ 131 ಕುಟುಂಬಗಳಿಗೆ ಸಾರ್ವಜನಿಕ ಸಂಪರ್ಕ ತಡೆಯೊಂದಿಗೆ ಜನವಸತಿಗಳಲ್ಲಿ ನಿರ್ಬಂಧ ವಿಧಿಸಿ ಪೊಲೀಸರನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾಗಿದೆ. ಈ ತಾಲೂಕಿನ ಕಗ್ಗೋಡ್ಲುವಿನಲ್ಲಿ ಕೊರೊನಾ ಸೋಂಕಿತ ಆರೋಗ್ಯ ಕಾರ್ಯಕರ್ತೆಯ ಮನೆಗೆ ನಿರ್ಬಂಧ ವಿಧಿಸಿದ್ದು, ಅಕ್ಕಪಕ್ಕ ಜನವಸತಿ ಇಲ್ಲದ್ದರಿಂದ ಆ ಮನೆಗೆ ಮಾತ್ರ ನಿಯಮ ಜಾರಿಗೊಳಿಸಲಾಗಿದೆ. ಕಗ್ಗೋಡ್ಲುವಿನ 1 ಕುಟುಂಬಕ್ಕೆ ಸಾರ್ವಜನಿಕ ಸಂಪರ್ಕ ತಡೆಯೊಂದಿಗೆ ಅಲ್ಲಿಗೂ ನಿರ್ಬಂಧ ಹಾಕಲಾಗಿದೆ.
ಇನ್ನು ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಒಂದು ಪ್ರಕರಣ ಸಂಬಂಧ 25 ಕುಟುಂಬಗಳಿಗೆ ನಿಬರ್ಂಧ ಪ್ರದೇಶದಲ್ಲಿ ಸಾರ್ವಜನಿಕ ಸಂಪರ್ಕ ತಡೆ ಮಾಡಲಾಗಿದೆ. ಅಲ್ಲದೆ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಕೊರೊನಾ ಸೋಂಕು ಪತ್ತೆಯಾಗಿರುವ ಪ್ರದೇಶಗಳಲ್ಲಿ ಈ ನಿಬರ್ಂಧ ಜಾರಿಯಾಗಿದೆ. ಆ ಪ್ರಕಾರ ಕರ್ಕಳ್ಳಿಯಲ್ಲಿ 45 ಕುಟುಂಬ, ಮುಳ್ಳೂರು 45 ಹಾಗೂ ಶಿರಂಗಾಲ 31 ಸೇರಿದಂತೆ ದೊಡ್ಡಳ್ಳಿಯ 37 ಕುಟುಂಬಗಳಿಗೆ ನಿಬರ್ಂಧ ಹಾಕಲಾಗಿದೆ.
(ಮೊದಲ ಪುಟದಿಂದ) ಇಂದು ಹೊಸ ಪ್ರಕರಣ ಕಂಡು ಬಂದಿರುವ ಪ್ರದೇಶಗಳಲ್ಲಿ ಮತ್ತಷ್ಟು ಕುಟುಂಬಗಳಿಗೆ ಸಾರ್ವಜನಿಕ ಸಂಪರ್ಕ ತಡೆಯೊಂದಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿರುವ ಸುಳಿವು ಲಭಿಸಿದೆ. ಅಲ್ಲದೆ ಜಿಲ್ಲಾಡಳಿತದ ಆದೇಶ ಮೇರೆಗೆ ದೇಶ - ವಿದೇಶಗಳಿಂದ ಕೊರೊನಾ ‘ಲಾಕ್ಡೌನ್’ ನಡುವೆ ಜಿಲ್ಲೆಗೆ ವಾಪಾಸಾಗುವದರೊಂದಿಗೆ, ಆರೋಗ್ಯ ತಪಾಸಣೆಗೆ ಒಳಗಾಗದಿರುವ ಮಂದಿಯ ಪತ್ತೆಗೆ ಗ್ರಾಮ ಮಟ್ಟದಲ್ಲಿ ಶೋಧ ಕೈಗೊಳ್ಳಲಾಗಿದೆ.
ಜನ ವಿರಳ : ಕೊಡಗಿನಲ್ಲಿ ಕೊರೊನಾ ಸೋಂಕಿನ ಆತಂಕದ ಕಾರಣವೆಂಬಂತೆ, ಇಂದು ಜಿಲ್ಲಾ ಕೇಂದ್ರ ಮಡಿಕೇರಿಯ ಶುಕ್ರವಾರ ಸಂತೆ ನಿಬರ್ಂಧವಿತ್ತು. ಹೀಗಾಗಿ ಜನ ಕೂಡ ವಿರಳ ಸಂಖ್ಯೆಯಲ್ಲಿ ಕಂಡು ಬಂತು. ಗ್ರಾಮಾಂತರ ಜನತೆಯು ಕೂಡ ಆಗಮಿಸದೆ ಯಾವದೇ ಜನಜಂಗುಳಿ ಇರಲಿಲ್ಲ. ಮಹದೇವಪೇಟೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ತರಕಾರಿ ವ್ಯಾಪಾರಿಗಳ ಸಂಖ್ಯೆ ಕ್ಷೀಣವಿತ್ತು. ಗ್ರಾಹಕರ ಸುಳಿವು ಕೂಡ ಅಷ್ಟಾಗಿ ಕಾಣಬರಲಿಲ್ಲ. ಅಲ್ಲಲ್ಲಿ ಅಂಗಡಿಗಳು ಸ್ವಯಂ ಮುಚ್ಚಿಕೊಂಡಿದ್ದವು. ಮೀನು, ಕೋಳಿ ಇತ್ಯಾದಿ ಮಾಂಸ ಮಾರಾಟ ಕಂಡು ಬಂದರೂ ಗ್ರಾಹಕರು ಕೈಬೆರಳೆಣಿಕೆಯಿದ್ದರಷ್ಟೆ ಪೊಲೀಸರು ಮಾತ್ರ ನಿರಂತರ ವಾಹನಗಳಲ್ಲಿ ಸಂಚರಿಸಿ ಗುಂಪು ಸೇರದಂತೆ ತಿಳಿಹೇಳುತ್ತಿದ್ದರು. ಸಾರಿಗೆ ಬಸ್ ಸೇರಿದಂತೆ ಇತರ ವಾಹನ ಪ್ರಯಾಣ ಕೂಡ ಅಷ್ಟಾಗಿ ಇರಲಿಲ್ಲ.
ಹುಲಸೆ ಸೇರ್ಪಡೆ
ಕೂಡಿಗೆ: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಸೆ (ಹಕ್ಕೆ) ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಈ ವ್ಯಕ್ತಿ ದೆಹಲಿಯಲ್ಲಿ ಸಿ ಆರ್.ಪಿ ಪೆÇೀಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಂದಿದ್ದರು. ಬರುವ ಸಂದರ್ಭದಲ್ಲಿ ತಪಾಸಣೆ ಮಾಡಲಾಗಿತ್ತು. ಅಲ್ಲದೆ ಗಂಟಲ ದ್ರವವನ್ನು ತೆಗೆದುಕೊಳ್ಳಲಾಗಿತ್ತು. ಇಂದು ವರದಿ ಬಂದ ನಂತರ ಆ ವ್ಯಕ್ತಿಯನ್ನು ಆರೋಗ್ಯ ಇಲಾಖೆಯ ಮೂಲಕ ಮಡಿಕೇರಿ ಕೋವಿಡ್ - 19 ಆಸ್ಪತ್ರೆಗೆ ತಹಶೀಲ್ದಾರ್ ಗೋವಿಂದರಾಜ್ ಆದೇಶದಂತೆ ಕಳುಹಿಸಲಾಗಿದೆ.
ಮನೆಯಲ್ಲಿದ್ದ ಅವರ ಹೆಂಡತಿ ಮತ್ತು ಎರಡು ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವ್ಯಾಪ್ತಿಯ 5 ಕುಟುಂಬಗಳಿಗೆ ನಿಬರ್ಂಧ ಅನ್ವಯಿಸಲಿದೆ. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಸುನಿಲ್, ವೈದ್ಯಾಧಿಕಾರಿ ಸುಪ್ರೀತಾ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭರತ್ ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಶಾ ಕಾರ್ಯಕರ್ತೆಯರು ಸ್ಧಳದಲ್ಲಿದರು.
ಗ್ರಾಮಸ್ಥರ ನಿರ್ಧಾರ
*ಗೋಣಿಕೊಪ್ಪಲು: ಕೈಕೇರಿ ಗ್ರಾಮದ ಗ್ರಾಮಸ್ಥರು ಕೊರೊನಾ ವೈರಸ್ ನಿಯಂತ್ರಣಕ್ಕೆ ಸಭೆ ನಡೆಸಿ ಗ್ರಾಮದಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ಹಲವು ನಿಬಂಧನೆಗಳೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಕೈಕೇರಿ ಗ್ರಾಮದ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ನಡೆದ ವಿಶೇಷ ಸಭೆಯಲ್ಲಿ ಗ್ರಾಮದ ಅಧ್ಯಕ್ಷ ಮುತ್ತಣ್ಣ ಅವರ ನೇತೃತ್ವದಲ್ಲಿ ಆರ್.ಎಂ.ಸಿ. ಸದಸ್ಯ ಚಿಯಕ್ಪೂವಂಡ ಸಂಚರಿಸಿ ಗುಂಪು ಸೇರದಂತೆ ತಿಳಿಹೇಳುತ್ತಿದ್ದರು. ಸಾರಿಗೆ ಬಸ್ ಸೇರಿದಂತೆ ಇತರ ವಾಹನ ಪ್ರಯಾಣ ಕೂಡ ಅಷ್ಟಾಗಿ ಇರಲಿಲ್ಲ.
ಹುಲಸೆ ಸೇರ್ಪಡೆ
ಕೂಡಿಗೆ: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಸೆ (ಹಕ್ಕೆ) ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಈ ವ್ಯಕ್ತಿ ದೆಹಲಿಯಲ್ಲಿ ಸಿ ಆರ್.ಪಿ ಪೆÇೀಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಂದಿದ್ದರು. ಬರುವ ಸಂದರ್ಭದಲ್ಲಿ ತಪಾಸಣೆ ಮಾಡಲಾಗಿತ್ತು. ಅಲ್ಲದೆ ಗಂಟಲ ದ್ರವವನ್ನು ತೆಗೆದುಕೊಳ್ಳಲಾಗಿತ್ತು. ಇಂದು ವರದಿ ಬಂದ ನಂತರ ಆ ವ್ಯಕ್ತಿಯನ್ನು ಆರೋಗ್ಯ ಇಲಾಖೆಯ ಮೂಲಕ ಮಡಿಕೇರಿ ಕೋವಿಡ್ - 19 ಆಸ್ಪತ್ರೆಗೆ ತಹಶೀಲ್ದಾರ್ ಗೋವಿಂದರಾಜ್ ಆದೇಶದಂತೆ ಕಳುಹಿಸಲಾಗಿದೆ.
ಮನೆಯಲ್ಲಿದ್ದ ಅವರ ಹೆಂಡತಿ ಮತ್ತು ಎರಡು ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವ್ಯಾಪ್ತಿಯ 5 ಕುಟುಂಬಗಳಿಗೆ ನಿಬರ್ಂಧ ಅನ್ವಯಿಸಲಿದೆ. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಸುನಿಲ್, ವೈದ್ಯಾಧಿಕಾರಿ ಸುಪ್ರೀತಾ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭರತ್ ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಶಾ ಕಾರ್ಯಕರ್ತೆಯರು ಸ್ಧಳದಲ್ಲಿದರು.
ಗ್ರಾಮಸ್ಥರ ನಿರ್ಧಾರ
*ಗೋಣಿಕೊಪ್ಪಲು: ಕೈಕೇರಿ ಗ್ರಾಮದ ಗ್ರಾಮಸ್ಥರು ಕೊರೊನಾ ವೈರಸ್ ನಿಯಂತ್ರಣಕ್ಕೆ ಸಭೆ ನಡೆಸಿ ಗ್ರಾಮದಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ಹಲವು ನಿಬಂಧನೆಗಳೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಕೈಕೇರಿ ಗ್ರಾಮದ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ನಡೆದ ವಿಶೇಷ ಸಭೆಯಲ್ಲಿ ಗ್ರಾಮದ ಅಧ್ಯಕ್ಷ ಮುತ್ತಣ್ಣ ಅವರ ನೇತೃತ್ವದಲ್ಲಿ ಆರ್.ಎಂ.ಸಿ. ಸದಸ್ಯ ಚಿಯಕ್ಪೂವಂಡ ಸುಬ್ರಮಣಿ, ಗ್ರಾಮ ಪಂಚಾಯಿತಿ ಸದಸ್ಯ ಜಯಾಪೂಣಚ್ಚ, ತಾಲೂಕು ಬಿಜೆಪಿ ಉಪಾಧ್ಯಕ್ಷ ಗಿರೀಶ್ ಪೂವಣ್ಣ, ಲಯನ್ಸ್ ಮಾಜಿ ಅಧ್ಯಕ್ಷರು ಜಮ್ಮಡ ಮೋಹನ್ ಸೇರಿದಂತೆ ಗ್ರಾಮದಲ್ಲಿನ ಭದ್ರತೆಗಾಗಿ ಹಲವು ನಿಯಮಗಳನ್ನು ಜಾರಿಗೆ ತರಲಾಯಿತು. ಗ್ರಾಮಸ್ಥರ ನಿರ್ಧಾರದಂತೆ ಪರ ಊರಿನಿಂದ ಬಂದವರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶ ನಿಷೇಧ, ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಆಗಮಿಸುವ ಅತಿಥಿಗಳನ್ನು ಗ್ರಾಮಕ್ಕೆ ಬಾರದಂತೆ ನೋಡಿಕೊಳ್ಳುವುದರೊಂದಿಗೆ ಅವರನ್ನು ಕ್ವಾರೆಂಟೈನ್ಗೆ ಒಳಪಡಿಸುವ ಜವಾಬ್ದಾರಿಯನ್ನು ಮನೆಯ ಮಾಲೀಕರೇ ಹೊರತಕ್ಕದ್ದು ಎಂಬ ಷರತ್ತುಗಳೊಂದಿಗೆ, ಈ ಬಗ್ಗೆ ಮಾಹಿತಿಯನ್ನು ಆಶಾಕಾರ್ಯಕರ್ತೆ ಯರಿಗೆ, ಆರೋಗ್ಯ ಇಲಾಖೆ ಅಥವಾ ಕಂದಾಯ ಇಲಾಖೆಗೆ ನೀಡುವಂತೆ ನಿರ್ಣಯಿಸಲಾಯಿತು.
ಅನಿವಾರ್ಯ ಕಾರಣದಿಂದ ಕರ್ತವ್ಯಕ್ಕೆ ಹೊರಗೆ ಹೋದಲ್ಲಿ ಅವರನ್ನು ಕ್ವಾರಂಟೈನ್ ಮಾಡುವಂತೆ ಮತ್ತು ತೋಟದ ಕೆಲಸಕ್ಕೆ ಪರ ಊರಿನಿಂದ ಬರುವ ಕಾರ್ಮಿಕರ ವಿವರವನ್ನು ಕಡ್ಡಾಯವಾಗಿ ಪಡೆದುಕೊಂಡು ಅವರ ಮೇಲೆ ಗಮನ ಹರಿಸುವಂತೆ ನಿರ್ಧರಿಸಲಾಯಿತು. ಗ್ರಾಮದಲ್ಲಿ ಮಾಸ್ಕ್, ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ವ್ಯಾಪಾರಿಗಳು ಮೀನನ್ನು ಹಗಲು ಹೊತ್ತಿನಲ್ಲಿಯೇ ತರಿಸಿಕೊಂಡು ವ್ಯಾಪಾರ ನಡೆಸುವಂತೆ ತೀರ್ಮಾನಿಸಲಾಯಿತು. ಅಲ್ಲದೇ ಸಂಚಾರಿ ವ್ಯಾಪಾರ, ಹೋಂ ಸ್ಟೇ, ರೆಸಾರ್ಟ್ಗಳಿಗೆ ನಿಷೇಧ ಹೇರಲಾಗಿದ್ದು, ಗ್ರಾಮದಿಂದ ಕ್ವಾರೆಂಟೈನ್ ಹೊಟೇಲಿಗೆ ಕೆಲಸಕ್ಕೆ ಹೋಗುವವರು ಅಲ್ಲಿಯೇ ತಂಗುವಂತೆಯೂ ಮತ್ತು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರ ಬಗ್ಗೆ ಮನೆಯ ಮಾಲೀಕರು ಹೆಚ್ಚಿನ ಗಮನ ಹರಿಸಿ ಕೊರೊನಾದ ಬಗ್ಗೆ ಅರಿವು ಮೂಡಿಸಿ ಗ್ರಾಮವನ್ನು ಕೊರೊನಾ ಮುಕ್ತವಾಗಿ ಮಾಡಲು ಕ್ರಮ ಕೈಗೊಳ್ಳಬೇಕೆಂದರು.
ಮೊಬೈಲ್ ಮಳಿಗೆಗಳು ಬಂದ್
ಚೆಟ್ಟಳ್ಳಿ: ದಿನದಿಂದ ದಿನಕ್ಕೆ ಕೊಡಗಿನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕುಶಾಲನಗರದ ಮೊಬೈಲ್ ಮಳಿಗೆ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗ್ಗಟ್ಟನ್ನು ಶುಕ್ರವಾರದಂದು 2 ಗಂಟೆಗೆ ಬಂದ್ ಮಾಡಿದರು.
ಕುಶಾಲನಗರದ ರಥಬೀದಿಯಲ್ಲಿ ಒಂದು ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಕುಶಾಲನಗರದ ಮೊಬೈಲ್ ಅಂಗಡಿಗಳ ಮಾಲೀಕರು ಒಂದು ವಾರದವರೆಗೆ ಮಧ್ಯಾಹ್ನ 2 ಗಂಟೆಗೆ ಮಳಿಗೆಗಳನ್ನು ಮುಚ್ಚುವಂತೆ ತೀರ್ಮಾನ ಕೈಗೊಂಡಿದ್ದಾರೆ. ಕುಶಾಲನಗರದ ಮೊಬೈಲ್ ಮಾಲೀಕರ ಯೂನಿಯನ್ ತೀರ್ಮಾನದಂತೆ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಮಳಿಗೆಗಳನ್ನು ಮುಚ್ಚಿ ಸಹಕರಿಸಿದರು.
ಈ ಸಂದರ್ಭ ಮಾತನಾಡಿದ ಮೊಬೈಲ್ ಡೀಲರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ವಿಕ್ಕಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಲ್ಲದೇ ಕುಶಾಲನಗರದಲ್ಲಿಯೂ ಒಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಒಂದು ವಾರದ ತನಕ ಮಧ್ಯಾಹ್ನ ಮಳಿಗೆಗಳನ್ನು ಮುಚ್ಚುವಂತೆ ಸಂಘ ತೀರ್ಮಾನ ಕೈಗೊಂಡಿದೆ ಎಂದರಲ್ಲದೆ ಚೇಂಬರ್ ಆಫ್ ಕಾಮರ್ಸ್ನ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು. ಈ ಸಂದರ್ಭ ಕುಶಾಲನಗರ ಮೊಬೈಲ್ ಡೀಲರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಫಜಲ್ ಹಾಗೂ ಕೆ.ಬಿ.ಷಂಶುದ್ದೀನ್, ರಾಕೇಶ್, ಜಾಕೀರ್, ರಮೇಶ್, ಗೋಪಾಲ್ ಹಾಗೂ ಇನ್ನಿತರರು ಇದ್ದರು.