ನಾಪೆÇೀಕ್ಲು, ಜೂ. 25: ನಾಪೆÇೀಕ್ಲು ತೋಟಗಾರಿಕೆ ಇಲಾಖೆ ಬಳಿಯಿಂದ ಬೇತು, ನಾಪೆÇೀಕ್ಲು ನಗರಕ್ಕೆ ಹೋಗುವ ಸಂಪರ್ಕ ರಸ್ತೆಯು ಕಳೆದ 10 ವರ್ಷಗಳಿಂದ ದುರಸ್ತಿಕಾಣದೇ ನಡೆಯಲಾರದ ಪರಿಸ್ಥಿತಿಯಲ್ಲಿದೆ. ರಾಜ್ಯ ಸರಕಾರವು ಜಿಲ್ಲೆಯ ರಸ್ತೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ಹಣವನ್ನು ಪ್ಯಾಕೇಜಿನಲ್ಲಿ ಮಂಜೂರು ಮಾಡಿದರೂ ಇಂತಹ ರಸ್ತೆಯ ಅಭಿವೃದ್ಧಿ ಇನ್ನು ಮರೀಚಿಕೆಯಾಗಿದೆ. ಇದೊಂದು ಬೈಪಾಸ್ ರಸ್ತೆಯಾಗಿದ್ದು ಈ ರಸ್ತೆ ಡಾಂಬರೀಕರಣಗೊಂಡರೆ, ಬೇತು, ನಾಪೆÇೀಕ್ಲು ಮತ್ತು ಪಾರಾಣೆ ವಿಭಾಗದ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂಬುದು ಈ ವಿಭಾಗದ ಸಾರ್ವಜನಿಕರ ಆಗ್ರಹವಾಗಿದೆ.