ಕುಶಾಲನಗರ, ಜೂ. 25: ಕುಶಾಲನಗರ ರೋಟರಿ 3181 ರ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಪಿ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ 2020-21 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಉಪಾಧ್ಯಕ್ಷರಾಗಿ ಎಂ.ಡಿ.ರಂಗಸ್ವಾಮಿ, ಕಾರ್ಯದರ್ಶಿ ಯಾಗಿ ಉಲ್ಲಾಸ್ ಕೃಷ್ಣ, ಖಜಾಂಚಿಯಾಗಿ ಪ್ರೇಮಚಂದ್ರನ್ ನೇಮಕಗೊಂಡಿದ್ದಾರೆ. ಪದಗ್ರಹಣ ಸಮಾರಂಭವನ್ನು ಮುಂದಿನ ಸಾಲಿನ ರಾಜ್ಯಪಾಲ ಎ.ಆರ್.ರವೀಂದ್ರಭಟ್ ನೆರವೇರಿಸಿದರು. ಈ ಸಂದರ್ಭ ರೋಟರಿ ಸಹಾಯಕ ರಾಜ್ಯಪಾಲ ಪಿ.ನಾಗೇಶ್, ಪಿ.ಕೆ.ರವಿ, ರವಿಶಂಕರ್, ಎಚ್.ಟಿ. ಅನಿಲ್, ಎನ್.ಜಿ.ಪ್ರಕಾಶ್, ಹಿಂದಿನ ಸಾಲಿನ ಅಧ್ಯಕ್ಷ ಎಂ.ಡಿ.ಅಶೋಕ್, ಕಾರ್ಯದರ್ಶಿ ಯಾಗಿದ್ದ ಸಂಜು ಬೆಳ್ಯಪ್ಪ ನೂತನ ಸಾಲಿನ ಪದಾಧಿಕಾರಿಗಳು, ಹಿರಿಯ ರೋಟರಿ ಸದಸ್ಯರಾದ ಎಸ್.ಕೆ.ಸತೀಶ್, ಮಹೇಶ್ ನಾಲ್ವಡೆ, ಡಾ.ಹರಿ ಎ ಶೆಟ್ಟಿ, ಶೋಭಾ ಸತೀಶ್ ಮತ್ತಿತರರು ಇದ್ದರು.