ಕೂಡಿಗೆ, ಜೂ. 25: ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರೊನಾ ವಾರಿಯರ್ಸ್, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಇಲಾಖೆಯ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗಪುರದ ಹನಿಷ್, ಅಳುವಾರದ ದೀಪ, ಪ್ರೇಮ ತೊರೆನೂರುವಿನ ಚರೀತಾ ಶುಶ್ರೂಷಕಿ ಪದ್ಮಿನಿ ಸನ್ಮಾನ ಸ್ವೀಕರಿಸಿದರು. ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣಗೌಡ, ಉಪಾಧ್ಯಕ್ಷ ಡಿ.ಆರ್. ಪ್ರೇಮಕುಮಾರ್ ನಿರ್ದೇಶಕರುಗಳಾದ ಹೆಚ್.ಬಿ. ಚಂದ್ರಪ್ಪ, ಟಿ.ಕೆ. ಪಾಂಡುರಂಗ, ಹೆಚ್.ಟಿ. ಕುಶಾಲಪ್ಪ, ಟಿ.ಜಿ. ಲೋಕೇಶ್, ಟಿ.ಪಿ. ಪ್ರಸನ್ನ, ಹೆಚ್.ಆರ್. ಭಾಗ್ಯ, ಟಿ.ಕೆ. ಕುಮಾರ್, ಟಿ.ಎಂ. ಲಲಿತಾ, ಟಿ.ಜಿ ಶ್ರೀನಿವಾಸ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತು ಪ್ರಸಾದ್, ಕಛೇರಿ ಸಿಬ್ಬಂದಿ ಸಹಾನ, ಸಹಾಯಕ ಟಿ.ಜೆ. ರವಿ ಹಾಜರಿದ್ದರು.