*ಕೊಡ್ಲಿಪೇಟೆ, ಜೂ.25: ಮದುವೆ ಮಾತುಕತೆ ನಡೆದಿದ್ದ ಯುವತಿಯೋರ್ವಳು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡ್ಲಿಪೇಟೆ ಸಮೀಪದ ಶಿವಪುರದಲ್ಲಿ ನಡೆದಿದೆ. ಶಿವಪುರ ಗ್ರಾಮದ ಶಿವಣ್ಣ ಎಂಬವರ ಪುತ್ರಿ ಪವಿತ್ರ (ರಮ್ಯ 23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇನ್ಫೋಸಿಸ್ ಉದ್ಯೋಗಿಯಾಗಿದ್ದ ಪವಿತ್ರ, ಲಾಕ್ ಡೌನ್ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಂ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೆ ಮದುವೆ ಸಂಬಂಧವಾಗಿ ಮಾತುಕತೆ ನಡೆದಿದ್ದು, ಹುಡುಗನನ್ನು ಸಹ ಮನೆಯವರು ನೋಡಿ ಬಂದಿದ್ದರು. ಮದುವೆ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಯುವತಿಯ ತಂದೆ ಶಿವಣ್ಣ ಅವರು ಶನಿವಾರಸಂತೆ ಠಾಣೆಗೆ ದೂರು ನೀಡಿದ ಮೇರೆ ಪ್ರಕರಣ ದಾಖಲಾಗಿದೆ.