ಮಡಿಕೇರಿ, ಜೂ. 24: ಇತ್ತೀಚೆಗೆ ದೇಶದಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಕೂಡ ಏರಿಕೆಯಾಗುತ್ತಿದೆ. ಹಸಿರು ವಲಯಕ್ಕೆ ಸೇರಿದ್ದ ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ದಿಢೀರನೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನದಲ್ಲಿ 14 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ನಾಲ್ವರು ಸರಕಾರೀ ಆಸ್ಪತ್ರೆ ವೈದ್ಯರುಗಳನ್ನೂ ಒಳಗೊಂಡಂತೆ ಈ ಹಿಂದಿನ 8 ಪ್ರಕರಣ ಸೇರಿ ಇದೀಗ ಸೋಂಕಿತರ ಸಂಖ್ಯೆ 22ಕ್ಕೆ ಏರಿದೆ. ಈ ಪೈಕಿ ಮೂವರು ಗುಣಮುಖರಾಗಿದ್ದರೆ, ಇನ್ನು 19 ಮಂದಿಯಲ್ಲಿ ಪಾಸಿಟಿವ್ ಸಕ್ರಿಯವಾಗಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ ಕೋವಿಡ್ ಆಸ್ಪತ್ರೆಯ ಇಬ್ಬರು ಸಹಾಯಕ ಸಿಬ್ಬಂದಿಯೂ ಸೇರಿದ್ದಾರೆ. ನಿನ್ನೆಯವರೆಗೆ ಜಿಲ್ಲೆಯಲ್ಲಿ 5 ಪಾಸಿಟಿವ್ ಪ್ರಕರಣ ಸಕ್ರಿಯವಾಗಿತ್ತು. ಇದೀಗ ಇಂದು ಒಂದೇ ದಿನದಲ್ಲಿ 14 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಈ ಪೈಕಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿನ (ಅಶ್ವಿನಿ ಆಸ್ಪತ್ರೆ) ಓರ್ವ ಹಿರಿಯ ವೈದ್ಯರು ಹಾಗೂ ಮೂವರು ಎಂ.ಬಿ.ಬಿ.ಎಸ್. ವೈದ್ಯರುಗಳು ಸೇರಿ ನಾಲ್ವರು ವೈದ್ಯರಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಪಾಸಿಟಿವ್ ಬಂದಿರುವ ಹಿರಿಯ ಸರಕಾರಿ ವೈದ್ಯರು ನಡೆಸುತ್ತಿರುವ ಖಾಸಗಿ ಕ್ಲಿನಿಕ್‍ನ ವೈದ್ಯರ ಸಹಾಯಕರೊಬ್ಬರು ಹಾಗೂ ಕೋವಿಡ್ ಆಸ್ಪತ್ರೆಯ ಇಬ್ಬರು ಸಹಾಯಕ ಸಿಬ್ಬಂದಿಗಳಲ್ಲಿ ಕೂಡ ಪಾಸಿಟಿವ್ ಪತ್ತೆಯಾಗಿದೆ. ಇನ್ನುಳಿದಂತೆ ಬಿಟ್ಟಂಗಾಲದ ಇಬ್ಬರು ಹಾಗೂ ನಿನ್ನೆ ದಿನ ಅಶ್ವಿನಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದ ಪಿರಿಯಾಪಟ್ಟಣದ ಓರ್ವರಲ್ಲಿ ಪಾಸಿಟಿವ್ ಕಂಡುಬಂದಿದೆ. ನಿನ್ನೆ ಮಂಗಳವಾರ ದಿನÀ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಪಿ-9583 ವ್ಯಕ್ತಿಯ ಸಂಪರ್ಕದಲ್ಲಿದ್ದ ಅವರ ಕುಟುಂಬದವರೂ ಸೇರಿದಂತೆ ಮೂವರು ಹಾಗೂ ಪಿ-9215 ವ್ಯಕ್ತಿಯ ಸಂಪರ್ಕದಲ್ಲಿದ್ದ ಅವರ ಕುಟುಂಬದವರೂ ಸೇರಿದಂತೆ ಈರ್ವರಲ್ಲಿಯೂ ಪಾಸಿಟಿವ್ ಕಂಡುಬಂದಿದೆ.

ತುರ್ತು ಸೇವೆ ಮಾತ್ರ

ತಾ. 25 ರಂದು ಜಿಲ್ಲೆಯ ಅಶ್ವಿನಿ ಆಸ್ಪತ್ರೆಯನ್ನು (ಜಿಲ್ಲಾ ಆಸ್ಪತ್ರೆ) ಸೋಂಕು ನಿವಾರಣೆಗೊಳಿಸುವ ಕಾರ್ಯದ ನಿಮಿತ್ತ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ.

ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಂತ್ರಿತ ವಲಯಗಳನ್ನು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ.

ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕು ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಹಿಂದಿನ 8 ಪ್ರಕರಣಗಳು ಸೇರಿದಂತೆ ಒಟ್ಟು 22 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಗದಗ ಠಾಣೆ ಸೀಲ್‍ಡೌನ್3 ಪ್ರಕರಣಗಳ ರೋಗಿಗಳು ಗುಣಮುಖವಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 19 ಪ್ರಕರಣಗಳು ಸಕ್ರಿಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.