ಕಡಂಗ, ಜೂ. 26: ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಕೆಲವು ಅಪರಿಚಿತರು ಪಟ್ಟಣದ ಪ್ರಮುಖ ದಿನಸಿ ಅಂಗಡಿಗಳಾದ ಎಂಬಿ ಸ್ಟೋರ್ ಮತ್ತು ಸಿಎಂಎಂ ಮಾರ್ಟ್ನ ಬೀಗ ಒಡೆದು ಹಾಕಿ ಒಳನುಗ್ಗಿ ಅಮೂಲ್ಯ ವಸ್ತುಗಳು ಮತ್ತು ಹಣವನ್ನು ದೋಚಿ ಪರಾರಿಯಾದ ಪ್ರಕರಣ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ವರ್ತಕರಾದ ಶಫೀಕ್ ಮತ್ತು ಮುನೀರ್ ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕಾಡ್ಗಿಚ್ಚಿನಂತೆ ಕಡಂಗ ವ್ಯಾಪ್ತಿಯಲ್ಲಿ ಹಬ್ಬಿತು ಇದರಿಂದ ಆತಂಕಕ್ಕೊಳಗಾದ ಗ್ರಾಮಸ್ಥರು ಮತ್ತು ವರ್ತಕರು ಪರಾರಿಯಾದ ದುಷ್ಕರ್ಮಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೆÇಲೀಸರೊಂದಿಗೆ ವಿನಂತಿಸಿದರು. ಇದು ಮಾತ್ರವಲ್ಲದೆ ನೆರೆಯ ಎಡಪಾಲ ಗ್ರಾಮದ ಮಹಮ್ಮದ್ ಅವರ ದಿನಸಿ ಅಂಗಡಿ ಮತ್ತು ಅಬ್ದುಲ್ಲ ಅವರ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ ಬೆಲೆಬಾಳುವ ಸಾಮಗ್ರಿ ಮತ್ತು ಹಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಎಲ್ಲಾ ಅಂಗಡಿಗಳಲ್ಲಿ ಇದ್ದ ಸಿಸಿಟಿವಿ ಕ್ಯಾಮೆರಾವನ್ನು ದುಷ್ಕರ್ಮಿಗಳು ಹಾನಿ ಗೊಳಿಸಿದ್ದಾರೆ.
ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್, ಮಡಿಕೇರಿ ವಿಭಾಗದ ಎಸ್ಐ ದಿವಾಕರ್, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ, ನಾಪೆÇೀಕ್ಲು ಠಾಣಾಧಿಕಾರಿ ಮತ್ತು ಜಿಲ್ಲಾ ಶ್ವಾನದಳ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
-ವರದಿ: ನೌಫಲ್ ಕಡಂಗ