ಶನಿವಾರಸಂತೆ, ಜೂ. 24: ಹಂಡ್ಲಿ ಗಾ.ಪಂ. ವ್ಯಾಪ್ತಿಯ ಶಿರಂಗಾಲ ಗ್ರಾಮ ಸಂಪೂರ್ಣ ಸೀಲ್‍ಡೌನ್ ಆಗಿದ್ದು, ಈ ಸೋಂಕಿತ ಗ್ರಾಮದ 30 ಮನೆಗಳ ನಿವಾಸಿಗಳ ಆರೋಗ್ಯ ತಪಾಸಣೆಗೆ ಬಂದ ಡಾ. ಚೇತನ್, ಡಾ. ಇಂಧುದರ್ ಹಾಗೂ ಆರೋಗ್ಯ ನಿರೀಕ್ಷಕರಾದ ಮಹೇಶ್, ಈ ಸೀಲ್‍ಡೌನ್ ಗ್ರಾಮದಲ್ಲಿ ನಾಳೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಈರ್ವರು ವಿದ್ಯಾರ್ಥಿಗಳಿಗೆ ಸುರಕ್ಷತೆಗಾಗಿ ಮಾಸ್ಕ್ ಮತ್ತು ಹ್ಯಾಂಡ್‍ಗ್ಲೌಸ್‍ಗಳನ್ನು ವಿತರಿಸಿದರು.