ಗೋಣಿಕೊಪ್ಪ ವರದಿ, ಜೂ. 24: ಮರಂದೋಡ ದಲ್ಲಿ ಕಾಡಾನೆ ಹಿಂಡಿನಿಂದ ಫಸಲು ನಿರಂತರವಾಗಿ ನಾಶವಾಗುತ್ತಿದೆ. ಕಾಫಿ, ತೆಂಗು, ಅಡಿಕೆ ಬೆಳೆಗಳನ್ನು ತುಳಿದು ನಾಶ ಮಾಡಿವೆ. ಇದರಿಂದ ಗ್ರಾಮಸ್ಥರು ಬೇಸರಗೊಂಡಿದ್ದಾರೆ. ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಳೆಗಾಲವಾಗಿರುವುದರಿಂದ ನಿರಂತರ ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಳ್ಳಬೇಕು. ಆದರೆ, ಕಾಡಾನೆಗಳು ಹಗಲು ಕೂಡ ತೋಟದಲ್ಲಿ ಸೇರಿಕೊಂಡಿರುತ್ತದೆ. ಅತ್ತ ಹೋಗಲು ಭಯವಾಗುತ್ತಿದೆ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಸ್ಥಳೀಯರು ನೋವು ಹಂಚಿಕೊಂಡಿದ್ದಾರೆ.
ಅಲ್ಲಿನ ಅನ್ನಾಡಿಯಂಡ, ಅಣ್ಣಮಂಡ, ಮುಕ್ಕಾಟೀರ, ನಿಡುಮಂಡ ಹಾಗೂ ಚೋಯಮಾಡಂಡ ಕುಟುಂಬಸ್ತರಿಗೆ ಸೇರಿರುವ ತೋಟಗಳಲ್ಲಿ ಫಸಲು ನಾಶ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.