ಸೋಮವಾರಪೇಟೆ, ಜೂ. 24: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಕೋವಿಡ್-19 ವೈರಸ್ ತಡೆ ಜಾಗೃತಿ ಜಾಥಾ ನಡೆಯಿತು. ಮುಖ್ಯಾಧಿಕಾರಿ ನಾಚಪ್ಪ ನೇತೃತ್ವದ ತಂಡ, ಅಂಗಡಿ, ಹೊಟೇಲ್ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಶೀಲಿಸಿ ಸಲಹೆ ನೀಡಿದರು.

ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿ, ಹೊಟೇಲ್‍ನಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವದು ಎಂದು ಎಚ್ಚರಿಸಿದರು.