ಸೋಮವಾರಪೇಟೆ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು. ಮಹಿಳಾ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮೀಣ ಆರೋಗ್ಯ ಸಹಾಯಕಿಯರನ್ನು ಸನ್ಮಾನಿಸಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಆಶಾ ಕಾರ್ಯಕರ್ತರಾದ ಬಳಗುಂದ ಗ್ರಾಮದ ಸಾವಿತ್ರಿ, ನಗರೂರು ಎನ್. ಗಾಯಿತ್ರಿ, ಬಜೆಗುಂಡಿ ಶಾರದ, ನೇಗಳ್ಳೆ-ಕರ್ಕಳ್ಳಿಯ ಭವ್ಯಮೇಘ, ಕರ್ಕಳ್ಳಿಯ ಗಾಯಿತ್ರಿ, ಬೇಳೂರು ಗ್ರಾಮದ ಭಾಗೀರಥಿ, ಕೆಂಚಮ್ಮನಬಾಣೆಯ ನಾಗಮಣಿ, ದೊಡ್ಡಬ್ಬೂರು ಶೃತಿ, ಅರೆಯೂರು ಮುತ್ತಮ್ಮ, ಯಲಕನೂರು ಶಿಲ್ಪ, ಮಸಗೋಡು ಜಯಂತಿ ಶೆಟ್ಟಿ, ಆರೋಗ್ಯ ಸಹಾಯಕಿಯರಾದ ಬೇಳೂರು ಗ್ರಾಮದ ಕಮಲ, ನೇಗಳ್ಳೆ ಶೋಭ, ನೇರುಗಳಲೆ ದಿವ್ಯ, ಮಸಗೋಡು ದಿವ್ಯ, ತಣ್ಣೀರುಹಳ್ಳ ಲಲಿತ ಅವರುಗಳು ಸನ್ಮಾನ ಸ್ವೀಕರಿಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಬಿ.ಎಂ. ಸುರೇಶ್, ಚಂದ್ರಿಕಾ ಕುಮಾರ್, ರೂಪ ಸತೀಶ್, ಅನಿತಾ ಆನಂದ್, ಮೋಹನ್ದಾಸ್, ದಿವಾನ್, ಬಿ. ಶಿವಪ್ಪ, ಹೆಚ್.ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು. ಲೆಕ್ಕಿಗರಾದ ಅನಂತ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಕಿರಿಯ ಆರೋಗ್ಯಕಾರ್ಯಕರ್ತೆಯರಿಗೆ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಶಾಸಕ ಅಪ್ಪಚ್ಚು ರಂಜನ್ ಮತ್ತು ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ನೆರವೇರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಮನು ಮತ್ತು ನಿರ್ದೇಶಕರು ಹಾಜರಿದ್ದರು. ಈ ಸಂದರ್ಭ ಮಾತನಾಡಿದ ಶಾಸಕರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೊರೊನಾ ಕರ್ತವ್ಯವನ್ನು ಜವಾಜ್ದಾರಿಯಿಂದ, ನಿಷ್ಠೆಯಿಂದ ಮಾಡುತ್ತಿದ್ದು, ಅವರು ಈ ಸನ್ಮಾನಕ್ಕೆ ಸೂಕ್ತರು ಎಂದು ಬಣ್ಣಿಸಿದರು.
ಕೆ.ಸಿ. ರುಕ್ಮಿಣಿ ಮತ್ತು ರೆಣುಕಾ, ಅಲೊಕಿನಾ ಮೇರಿ, ಜಯಲಕ್ಷೀ, ಪವಿತ್ರ, ಸರಸ್ವತಿ, ಇವರುಗಳು ಸನ್ಮಾನ ಸ್ವೀಕರಿಸಿದರು. ಈ ಸಂದರ್ಭ ಸ್ಥಳೀಯ ಉದ್ಯಮಿ ಮಂಡೆಪಂಡ ಉತ್ತಪ್ಪ, ತಾ.ಪಂ. ಸದಸ್ಯೆ ಪುಷ್ಪ, ಗ್ರಾ,ಪಂ. ಸದಸ್ಯೆ ಡಾಟಿ, ಪುಷ್ಪ ಸಂಘದ ಕಾರ್ಯನಿರ್ವಹಣಾಧಿಕಾರಿ ಹನಿಕುಮಾರ್, ಜೀವನ್ ಮತ್ತು ಮಾಜಿ ನಿರ್ದೇಶಕ ಬಿ.ಕೆ. ಮೋಹನ್ ಮುಂತಾದವರು ಹಾಜರಿದ್ದರು. ಇದೇ ಸಂದರ್ಭ ಕಿರಿಯಾ ಆರೋಗ್ಯ ಸಹಾಯಕಿಯರಾದ ಭವಾನಿ ಮತ್ತು ಸೌಮ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಮೂರ್ನಾಡು: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ವಾರಿಯರ್ಸ್ಗಳಾದ ಮೂರ್ನಾಡು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ, ಮೂರ್ನಾಡು ಆರೋಗ್ಯ ಕೇಂದ್ರದ ವೈದ್ಯರಿಗೆ, ಪೆÇಲೀಸ್ ಠಾಣೆಯ ಸಿಬ್ಬಂದಿಯವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪವಿತ್ರ ಕುಂಞಪ್ಪ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಹಾಗೂ ಸದಸ್ಯರು ಹಾಜರಿದ್ದರು.ಮೂರ್ನಾಡು: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ವಾರಿಯರ್ಸ್ಗಳಾದ ಮೂರ್ನಾಡು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ, ಮೂರ್ನಾಡು ಆರೋಗ್ಯ ಕೇಂದ್ರದ ವೈದ್ಯರಿಗೆ, ಪೆÇಲೀಸ್ ಠಾಣೆಯ ಸಿಬ್ಬಂದಿಯವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪವಿತ್ರ ಕುಂಞಪ್ಪ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಹಾಗೂ ಸದಸ್ಯರು ಹಾಜರಿದ್ದರು.