ಕೂಡಿಗೆ, ಜೂ. 24: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ನೀರಾವರಿ ಇಲಾಖೆಯ ವಸಹಾತು ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆ ಕೆಲ ದಿನಗಳಿಂದ ಸಾರ್ವಜನಿಕರಿಗೆ ಉಪಯೋಗ ಆಗುತ್ತಿರಲ್ಲಿಲ್ಲ. ಇದನ್ನು ತಿಳಿದು ಅಭಿವೃದ್ಧಿಪಡಿಸಿ ಬೇಕಾಗುವ ವ್ಯವಸ್ಥೆಯನ್ನು ನೀರಾವರಿ ಇಲಾಖೆಯ ಸಹಕಾರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿತ್ತು. ಇದರ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಸಮೀಪದಲ್ಲಿಯೇ ಆರೋಗ್ಯ ಕೇಂದ್ರಗಳನ್ನು ತೆರೆಯುವುದರ ಮೂಲಕ ಜನರಿಗೆ ಸೇವೆಯನ್ನು ಒದಗಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ ಇಲ್ಲಿಯ ಸೇವೆಯನ್ನು ಈ ವ್ಯಾಪ್ತಿಯ ಗ್ರಾಮಸ್ಧರು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ನಾಯಕ್ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆತಂದು ಆಸ್ಪತ್ರೆಯ ಅವ್ಯವಸ್ಥೆಯನ್ನು ಬೆಳಕಿಗೆ ತಂದಿದ್ದರು. ನಂತರ ಅವರ ಸೂಚನೆಯ ಮೇರೆಗೆ ಉತ್ತಮವಾದ ಕಟ್ಟಡ ಇರುವುದರಿಂದ ಅದರ ದುರಸ್ತಿ ಕಾರ್ಯವನ್ನು ನೀರಾವರಿ ಇಲಾಖೆಯವರು ಸಂಪೂರ್ಣವಾಗಿ ನೆರವೇರಿಸಿದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಹತ್ತು ಗ್ರಾಮಗಳಿಗೆ ಆರೋಗ್ಯ ಸೇವೆಗೆ ಅನುಕೂಲವಾಗಿದೆ ಎಂದು ಬಾಸ್ಕರ್ ನಾಯಕ್ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ, ಮೋಹನ್ ತಾಲೂಕು ಪಂಚಾಯತಿ ಸದಸ್ಯ ಗಣೇಶ ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಭರತ್ ಮಾಚಯ್ಯ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ದುಗಾರ್ಂಬಿಕೆ ಕುಮಾರಸ್ವಾಮಿ ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ನಾಗರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.