ಸೋಮವಾರಪೇಟೆ,ಜೂ.23: ಭಾರತೀಯ ತಂಡದ ಸಂಭಾವ್ಯ ಆಟಗಾರರ ಕ್ಯಾಂಪ್‍ನಲ್ಲಿ ಸ್ಥಾನ ಪಡೆದಿದ್ದ ಪಟ್ಟಣದ ಹಿರಿಯ ಹಾಕಿ ಆಟಗಾರ, ವಿಶ್ವೇಶ್ವರಯ್ಯ ರಸ್ತೆ ನಿವಾಸಿ ಬಿ.ಪಿ ಕೃಷ್ಣ(68) ಅವರು ತಾ.23ರಂದು ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ಬಿ.ಪಿ.ಗೋವಿಂದ ಅವರ ಸಹೋದರರಾಗಿರುವ ಕೃಷ್ಣ ಅವರು ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. 6 ಬಾರಿ ಭಾರತ ಹಾಕಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದರೂ, ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಂಚಿತರಾಗಿದ್ದರು.