ವೀರಾಜಪೇಟೆ, ಜೂ. 23: ಮುಂದಿನ ಗುರುವಾರದಿಂದ ಪ್ರಾರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷಾ ಸಿಬ್ಬಂದಿಗಳಿಗೆ ಅಗತ್ಯವಾದ ಮುಖಗವಸು ಹಾಗೂ ಕೈಗವಸುಗಳನ್ನು ವೀರಾಜಪೇಟೆ ವೈಸ್‍ಮೆನ್ ಕ್ಲಬ್ ವತಿಯಿಂದ ಉಚಿತವಾಗಿ ನೀಡಲಾಯಿತು.

ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಸ್‍ಮೆನ್ ಕ್ಲಬ್‍ನ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಶಾಸಕ ಕೆ.ಜಿ.ಬೋಪಯ್ಯ ಅವರ ಮುಖಾಂತರ ಮುಖ್ಯ ಶಿಕ್ಷಕರುಗಳಿಗೆ ಮಾಸ್ಕ್ ಹಾಗೂ ಕೈಗವಸುಗಳನ್ನು ಹಸ್ತಾಂತರಿಸಿದರು. ಕ್ಲಬ್‍ನ ಪದಾಧಿಕಾರಿಗಳಾದ ಕೆ.ಪಿ.ರಶೀದ್, ಚೋಪಿ ಜೋಸೆಫ್, ವಿಷ್ಣುಮೂರ್ತಿ ಹಾಜರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಿಗಿ ಹಾಜರಿದ್ದರು.