ಮಡಿಕೇರಿ, ಜೂ. 22: ಕೊಡಗು ಜಿಲ್ಲೆಯ ಒಟ್ಟು ಒಂದುನೂರ ನಾಲ್ಕು ಗ್ರಾ.ಪಂ.ಗಳ ಪೈಕಿ ಒಂದೂನೂರ ಒಂದು ಪಂಚಾಯಿತಿಗಳ ಆಡಳಿತ ಮಂಡಳಿಯ ಜನಪ್ರತಿನಿಧಿಗಳ ಆಳ್ವಿಕೆ ಕೊನೆಗೊಳ್ಳುವುದರೊಂದಿಗೆ, ಸಂಬಂಧಿಸಿದ ಪಂಚಾಯಿತಿಗಳಿಗೆ ನೂತನ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಈ ಸಂಬಂಧ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರಾಜ್ಯ ಸರಕಾರದ ಆದೇಶ ಮೇರೆಗೆ ಮುಂದಿನ ಕ್ರಮಕೈಗೊಂಡಿದ್ದಾರೆ.ಪ್ರಸ್ತುತ ಜಿಲ್ಲೆಯ 104 ಗ್ರಾ.ಪಂ.ಗಳ ಪೈಕಿ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ ಗ್ರಾ.ಪಂ. ಆಡಳಿತ ಅವಧಿ 2021ಕ್ಕೆ ಹಾಗೂ ಚನ್ನಯ್ಯನಕೋಟೆ ಗ್ರಾ.ಪಂ. ಅಧಿಕಾರ 2022ಕ್ಕೆ ಮುಕ್ತಾಯಗೊಳ್ಳಲಿದೆ. ಆ ಹೊರತು ಇನ್ನುಳಿದ 101 ಗ್ರಾ.ಪಂ. ಗಳಿಗೆ ಜನಪ್ರತಿನಿಧಿಗಳ ಆಳ್ವಿಕೆ ಮುಕ್ತಾಯಗೊಳ್ಳುವ ಕಾರಣ; ನೂತನ ಆಡಳಿತಾಧಿಕಾರಿಗಳನ್ನು ನೇಮಿಸ ಲಾಗಿದೆ ಎಂದು ಜಿಲ್ಲಾ ಚುನಾವಣಾ ಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(1) ಬಿ (11)ರ ಅಡಿಯಲ್ಲಿ 321ರ ನಿಯಮದಂತೆ ಸದರಿ ನಿಯಮದ ಪ್ರಕರಣ 41 ಮತ್ತು 42 ರಂತೆ ಅವಧಿ ಪೂರ್ಣ ಗೊಂಡಿರುವ ಗ್ರಾಮ ಪಂಚಾಯಿತಿ ಗಳಿಗೆ ಆಡಳಿತಾದಿ üಕಾರಿಗಳನ್ನು ನೇಮಿಸಲಾಗಿದೆ.
ಮಾರ್ಗ ಸೂಚಿ: ಗ್ರಾಮ ಪಂಚಾಯಿತಿಗಳಿಗೆ ನೇಮಕ ಗೊಂಡಿರುವ ಆಡಳಿತಾಧಿಕಾರಿಗಳು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಳೊಂದಿಗೆ ಜಂಟಿಯಾಗಿ, ಲೆಕ್ಕಪತ್ರ ದೊಂದಿಗೆ ಹಣಕಾಸು ನಿರ್ವಹಿ ಸುವುದು ಸೇರಿದಂತೆ, ಕಾಲ ಕಾಲಕ್ಕೆ ಜನತೆಯ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸುವಂತೆ ಮಾರ್ಗಸೂಚಿ ನೀಡಲಾಗಿದೆ.
ಕೊರೊನಾ ತಡೆಗೆ ಕ್ರಮ: ನೂತನ ಆಡಳಿತಾಧಿಕಾರಿಗಳು, ಗ್ರಾ.ಪಂ.ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೈನಂದಿನ ಕೆಲಸ ಕಾರ್ಯಗಳನ್ನು ಗಮನಿಸುವುದು ಸೇರಿದಂತೆ ಕೊರೊನಾ ಸೋಂಕು ತಡೆ ಸಹಿತ ಎಲ್ಲ ಆಡಳಿತಾತ್ಮಕ ಚಟುವಟಿಕೆಗಳನ್ನು ಕ್ರಮಬದ್ಧವಾಗಿ
(ಮೊದಲ ಪುಟದಿಂದ) ನಿರ್ವಹಿಸಲು ಆದೇಶಿಸಲಾಗಿದೆ. ಮಾತ್ರವಲ್ಲದೆ ಗ್ರಾ.ಪಂ. ಅಧೀನಕ್ಕೆ ಒಳಪಡುವ ಶಿಕ್ಷಣ ಸಂಸ್ಥೆಗಳು, ಗ್ರಂಥಾಲಯಗಳು ಇನ್ನಿತರ ಇಲಾಖಾ ನೌಕರರಿಗೆ ಕಾಲಕಾಲಕ್ಕೆ ಮಾಸಿಕ ವೇತನ ನೀಡುವುದು ಸೇರಿದಂತೆ ಗ್ರಾ.ಪಂ. ಅಧ್ಯಕ್ಷರ ಹೊಣೆಗಾರಿಕೆಗಳನ್ನು ಆಡಳಿತಾಧಿಕಾರಿ ನಿಭಾಯಿಸುವುದರೊಂದಿಗೆ, ಜಿಲ್ಲಾಡಳಿತ ಮತ್ತು ಸರಕಾರದ ಆದೇಶಗಳನ್ನು ಕಾಲಕಾಲಕ್ಕೆ ನಿರ್ವಹಿಸುವಂತೆ ನೆನಪಿಸಲಾಗಿದೆ.
ನೇಮಕಾತಿ ಅವಕಾಶವಿಲ್ಲ: ಇದರೊಂದಿಗೆ ಗ್ರಾ.ಪಂ. ಹಾಗೂ ಆಯ ವ್ಯಾಪ್ತಿಯಲ್ಲಿ ಯಾವುದೇ ನೌಕರರ ಹುದ್ದೆಗಳಿಗೆ ಆಡಳಿತಾಧಿಕಾರಿಗಳು ನೇಮಕಾತಿ ಮಾಡುವಂತಿಲ್ಲವೆಂದು ಆದೇಶದಲ್ಲಿ ನಿರ್ದೇಶನವಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಮಾರ್ಗಸೂಚಿಯಂತೆ ಗ್ರಾ.ಪಂ. ಕೆಲಸ ಕಾರ್ಯಗಳನ್ನು ಆಡಳಿತಾಧಿಕಾರಿಗಳು ನಿರ್ವಹಿಸಬೇಕಿದೆ.