ಕೂಡಿಗೆ, ಜೂ. 21: ಸೋಮವಾರಪೇಟೆ ತಾಲೂಕಿನ ರೈತ ಸಂಪರ್ಕ ಕೇಂದ್ರ, ಮತ್ತು ಎಲ್ಲಾ ಸಹಕಾರ ಸಂಘಗಳಲ್ಲಿ ಮುಂಗಾರು ಬೆಳೆಯಾಗಿ ರೈತರು ನೀರಾವರಿಯ ಸೌಲಭ್ಯಗಳನ್ನು ಮಾಡಿಕೊಂಡು ಭತ್ತವನ್ನು ಬೆಳೆಯಲು ಬೇಕಾಗುವ ಬಿತ್ತನೆ ಬೀಜಗಳು ದಾಸ್ತಾನು ಇದ್ದು ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುವುದು. ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ. ಡಾ. ಹೆಚ್.ಎಸ್. ರಾಜಶೇಖರ್ ಮನವಿ ಮಾಡಿದ್ದಾರೆ.

ತಾಲೂಕಿನ ಕೃಷಿ ರೈತ ಸಂರ್ಪಕ ಕೇಂದ್ರದಲ್ಲಿ ,ಮತ್ತು ಸಹಕಾರ ಕೇಂದ್ರದಲ್ಲಿ ದೀರ್ಘಾವಧಿಯ ತಳಿಗಳಾದ ತುಂಗಾ, ತುನು, ಬಾಂಗ್ಲ್ ರೈಸ್, ಬಿ.ಎಸ್. ಅತೀರಾ, ಸೇರಿದಂತೆ ಅಲ್ಪಾವಧಿಯ ತಳಿಯಾದ ಗಂಗಾಕಾವೇರಿ, ಹೈಬ್ರೀಡ್ ತಳಿಯ ಭತ್ತದ ಬೀಜದ ಮೂಟ್ಟೆಗಳನ್ನು ದಾಸ್ತಾನು ಇಡಲಾಗಿದೆ ಎಂದರು.

ರೈತರಿಗೆ ಒಂದು ಚೀಲ 25 ಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಂದು ಕೆ.ಜಿ ಗೆ ರೂ. 12 ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಸಾಮಾನ್ಯ ವರ್ಗಕ್ಕೆ ರೂ.9 ರಿಯಾಯಿತಿ ಇರುತ್ತದೆ ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.