ಚೆಟ್ಟಳ್ಳಿ, ಜೂ. 21: ನವೀಕರಣಗೊಂಡು ಪುನರ್ ಪ್ರತಿಷ್ಠಾಪನೆಗೊಂಡ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದ ಸನ್ನಿದಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿಲುವಾಲಮೂಲೆ ಶ್ರೀಶಿವಸುಬ್ರಮಣಿ ಭಟ್ಟ್ ಅವರ ನೇತೃತ್ವದಲ್ಲಿ ದ್ರಢಕಳಶಪೂಜೆ ನೆರವೇರಿತು.
ಹಲವು ವರ್ಷಗಳ ಇತಿಹಾಸ ಹೊಂದಿರುವ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯವನ್ನು ಊರಿನವರ ಹಾಗೂ ದಾನಿಗಳ ಸಹಾಯ ಹಸ್ತದಿಂದ ದೇವಾಲಯವನ್ನು ಜೀರ್ಣೊದ್ಧಾರಗೊಳಿಸಲು ಮುಂದಾದರು. ಅದೇ ರೀತಿ ಫೆ. 24 ರಿಂದ ಫೆ. 26 ರಂದು ಬ್ರಹ್ಮಶ್ರೀ ವೇದಮೂರ್ತಿ ಶಿಲುವಾಲಮೂಲೆ ಶ್ರೀ ಶಿವಸುಬ್ರಮಣಿ ಭಟ್ ಅವರ ನೇತೃತ್ವದಲ್ಲಿ ನವೀಕರಣ ಪುನರ್ ಪ್ರತಿಷ್ಠಾಪನೆ ಅಷ್ಟಬಂಧ ಕಲಶೋತ್ಸವ ನೆರವೇರಿತು. ದೇವಾಲಯದ ಸಮಿತಿಯ ತೀರ್ಮಾನದಂತೆ ದೇವಾಲಯ ತಕ್ಕಮುಖ್ಯಸ್ಥರಾದ ಮುಳ್ಳಂಡ ಸೂರು ಗಣಪತಿ ಹಾಗೂ ದೇವಾಲಯ ಸಮಿತಿಯ ಅಧ್ಯಕ್ಷರಾದ ಮುಳ್ಳಂಡ ಕ್ಯಾ. ತಿಮ್ಮಯ್ಯ ಅವರ ಸಮ್ಮುಖದಲ್ಲಿ ಊರಿನವರು, ದಾನಿಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಗಿತ್ತು.
ವಿಶ್ವದಾದ್ಯಂತ ಕಾಡುತ್ತಿರುವ ಕೊರೊನಾ ಮಹಾಮಾರಿಯ ನಿವಾರಣೆಗಾಗಿ ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಯಲದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.