ಪೆÇನ್ನಂಪೇಟೆ, ಜೂ.21: ಹಿರಿಯ ನ್ಯಾಯವಾದಿಗಳಾಗಿದ್ದ, ದಿ. ಎ.ಕೆ. ಸುಬ್ಬಯ್ಯ ಅವರ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದ ಕೊಡಗಿನ ಜಮ್ಮಾ ಸಮಸ್ಯೆ ಅಧಿಕಾರಿಶಾಹಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನವಾಗುತ್ತಿಲ್ಲ. ಆದ್ದರಿಂದ ಇದರ ವಿರುದ್ಧ ನ್ಯಾಯಾಲಯದಲ್ಲಿ ಮತ್ತೊಂದು ನ್ಯಾಯಾಂಗ ಹೋರಾಟದ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಪ್ರತಿಪಾದಿಸಿದ್ದಾರೆ. ದಿವಂಗತ ಎ.ಕೆ. ಸುಬ್ಬಯ್ಯ ಅವರ ಸ್ಮರಣಾರ್ಥವಾಗಿ ಅಸ್ತಿತ್ವಕ್ಕೆ ಬಂದಿರುವ ‘ಎ.ಕೆ. ಸುಬ್ಬಯ್ಯ ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್' ವತಿಯಿಂದ ಪೆÇನ್ನಂಪೇಟೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಬಡ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚೆಕ್ಕೇರ ಪೂವಯ್ಯ ಪ್ರಕರಣದಲ್ಲಿ ಕೊಡಗಿನ ಭೂ ಹಿಡುವಳಿದಾರರ ಪರವಾಗಿ ವಕಾಲತ್ತು ವಹಿಸಿದ್ದ ದಿ. ಸುಬ್ಬಯ್ಯ ಅವರ ವಿಶೇಷ ಆಸಕ್ತಿಯ ಫಲವಾಗಿ ಜಮ್ಮಾ ಸಮಸ್ಯೆ ಹಿಡುವಳಿದಾರರ ಪರವಾದ ತೀರ್ಪಿನ ಮೂಲಕ ಇತ್ಯರ್ಥಗೊಂಡಿದೆ.
ನಂತರದ ವರ್ಷ ಗಳಲ್ಲಿ ಈ ತೀರ್ಪಿನ ಆಧಾರದಲ್ಲೇ ರಾಜ್ಯದ ಶಾಸನಸಭೆ ಯಲ್ಲೂ ಅಂಗೀಕಾರಗೊಂಡು ಬಳಿಕ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿಯವರು ಅಂಕಿತ ಹಾಕುವ ಮೂಲಕ ಅದು ‘ನೆಲದ ಕಾನೂನಾಗಿ' ಜಾರಿಯಲ್ಲಿದೆ. ಆದರೆ ಅಧಿಕಾರಿಗಳ ಜನ ವಿರೋಧಿ ನೀತಿಯಿಂದ ಇದು ಅನುಷ್ಠಾನವಾಗದೆ
(ಮೊದಲ ಪುಟದಿಂದ) ಕೊಡಗಿನ ಜನರಿಗೆ ಇದರ ಪ್ರಯೋಜನ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಈ ಬಗ್ಗೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸಿ ಮತ್ತೊಂದು ಕಾನೂನು ಸಮರಕ್ಕೆ ಮುಂದಾಗಬೇಕಿದೆ. ಈ ಕುರಿತು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವಂತೆ ವೇದಿಕೆಯಲ್ಲಿದ್ದ ದಿ.ಎ.ಕೆ. ಸುಬ್ಬಯ್ಯ ಅವರ ಪುತ್ರ, ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್. ಪೆÇನ್ನಣ್ಣ ಅವರಿಗೆ ಕೊಡಗಿನ ಹಿಡುವಳಿದಾರರ ಪರವಾಗಿ ಸಲಹೆ ನೀಡುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಿ. ಎ.ಕೆ. ಸುಬ್ಬಯ್ಯ ಅವರ ಪುತ್ರ, ಹೈಕೋರ್ಟ್‍ನ ಹಿರಿಯ ವಕೀಲರಾದ ಎ.ಎಸ್. ಪೆÇನ್ನಣ್ಣ ಅವರು, ತಮ್ಮ ಪೆÇೀಷಕರ ನೆನಪಿಗಾಗಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ 'ಎ.ಕೆ. ಸುಬ್ಬಯ್ಯ ಮತ್ತು ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್' ಅನ್ನು ಮುಂಬರುವ ಆಗಸ್ಟ್ 27 ರಂದು ನಡೆಯುವ ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸುವ ಆಲೋಚನೆ ಇದೆ. ಇದಕ್ಕೂ ಮೊದಲು ಈ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ತಲ್ಲಣದಿಂದ ತೊಂದರೆ ಅನುಭವಿಸುತ್ತಿದ್ದ ವಲಸೆ ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಸಾಮಾಜಿಕ ಕೆಲಸ ಮಾಡಲಾಗಿದೆ. ಆದರೆ ಕೊಡಗಿನಲ್ಲಿಯೂ ತೊಂದರೆ ಅನುಭವಿಸುತ್ತಿರುವ ಬಡವರ್ಗದವರಿಗೆ ಸಹಾಯ ಮಾಡುವ ಉದ್ದೇಶದಿಂದ ಮೊದಲ ಹಂತವಾಗಿ ಜನರ ನಿತ್ಯ ಉಪಯೋಗಕ್ಕೆ ಅಗತ್ಯವಿರುವ ವಸ್ತುವನ್ನು ಒಳಗೊಂಡ 2000 ದಿನಸಿ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಎಸ್. ಕುಶಾಲಪ್ಪ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರು ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಹೈಕೋರ್ಟ್ ನ ಹಿರಿಯ ವಕೀಲ ಚಂದ್ರಮೌಳಿ, ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಶ್ರೀಜಾ ಶಾಜಿ ಅಚ್ಚುತ್ತನ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷÀ ಕೆ.ಎ.ಯಾಕೂಬ್, ತಾ. ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ಕೊಡಗು ಸಣ್ಣ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ, ಕಾಂಗ್ರೆಸ್ ಮುಖಂಡ, ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಆಲೀರ ರಶೀದ್, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆÀ ಕೋಳೆರ ಭಾರತಿ, ಕಾಂಗ್ರೆಸ್ ಮುಖಂಡ ಅಜಿತ್ ಅಯ್ಯಪ್ಪ, ಎಕೆಎಸ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.