ವೀರಾಜಪೇಟೆ, ಜೂ.22: ಇಲ್ಲಿನ ಪಂಜರುಪೇಟೆ-ಕಲ್ಲುಬಾಣೆ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಮೂಲಕ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಸದಸ್ಯರು ಶ್ರಮದಾನ ಮಾಡಿದರು.

ವೀರಾಜಪೇಟೆಯಿಂದ ಕಲ್ಲುಬಾಣೆಗೆ ಸಂಪರ್ಕ ಕಲ್ಪಿಸುವ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 2 ಕಿ.ಮೀ ರಸ್ತೆಯು ಹೊಂಡಗಳಿಂದ ಕೂಡಿ, ವಾಹನ ಸವಾರರು ಸೇರಿದಂತೆ ಪಾದಚಾರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನರಿತ ಸಂಘಟನೆಯ ಸುಮಾರು 20 ಮಂದಿ ಸದಸ್ಯರು ಕಲ್ಲುಮಣ್ಣುಗಳನ್ನು ಹಾಕಿ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚಿದ್ದಾರೆ. ಈ ಸಂದರ್ಭ ಜಮಾಆತ್ ಅಧ್ಯಕ್ಷ ಅಫ್ಸಲ್,ಕಾರ್ಯದರ್ಶಿ ನೌಷದ್, ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಅಧ್ಯಕ್ಷ ಯೂಸುಫ್, ಕಾರ್ಯದರ್ಶಿ ಸಾಹುದಲಿ, ವಿಕಾಯ ತಂಡದ ಪ್ರಮುಖರಾದ ಸಹದೀರ್, ಸಿಹಾಬ್, ಜೆಮ್ಸಿ, ರಸೀದ್, ಅನಾಸ್, ಸಫೀಕ್, ಅಫ್ಜಲ್, ಅಜ್ಮಲ್, ಸಫೀರ್, ಸಫ್ವಾನ್, ಅನೀಸ್, ಸಾಫಿ, ಸುಹೇಬ್, ಆಸೀಸ್, ನಿಜಾಮ್, ಶಂಶೀರ್, ಮುಬಶೀರ್ ಮತ್ತಿತರರು ಇದ್ದರು.